ಹುಬ್ಬಳ್ಳಿ : ಮೊದಲನೇ ಪತ್ನಿ ವಿಚ್ಛೇದನದ ನಂತರ ತನಗೆ ಎರಡನೇ ಮದುವೆ ಮಾಡಿಸಿಲ್ಲವೆಂದು ಕೋಪಗೊಂಡ ಅಣ್ಣನೊಬ್ಬ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಗರದ ಕೇಶ್ವಾಪುರದಲ್ಲಿ ನಡೆದಿದೆ.
ಇಲ್ಲಿನ ಚಲವಾದಿ ಓಣಿಯ ಮಹಾಂತೇಶ ಕುರಹಟ್ಟಿ ಎಂಬಾತ ತನ್ನ ತಮ್ಮನಾದ ಅಣ್ಣಪ್ಪ ಎಂಬುವನಿಗೆ ಚಪ್ಪೆಯ ಕೆಳಭಾಗ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಅಣ್ಣಪ್ಪನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.
ಮೊದಲನೇ ಪತ್ನಿ ವಿಚ್ಛೇದನದ ನಂತರ 2ನೇ ಮದುವೆ ಮಾಡಿಸುವಂತೆ ಮಹಾಂತೇಶ ಆಗಾಗ ತಮ್ಮನೊಂದಿಗೆ ಜಗಳವಾಡುತ್ತಿದ್ದ. ಆದರೆ, ತಮ್ಮ ಅಣ್ಣಪ್ಪ ಎರಡನೇ ಮದುವೆ ಮಾಡಿಸಲು ಒಪ್ಪದ ಕಾರಣ ಕೋಪಗೊಂಡ ಮಹಾಂತೇಶ್, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಈ ಕುರಿತು ಅಣ್ಣಪ್ಪ ಸಹೋದರ ಜಗದೀಶ್ ಎಂಬುವರು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಓದಿ: ಬಳ್ಳಾರಿ ವಿಮ್ಸ್ನ 14 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್!