ಹುಬ್ಬಳ್ಳಿ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಸುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಶಾಂತಿನಿಕೇತನ ಬಳಿ ನಡೆದಿದೆ.
ಗಾಯಗೊಂಡು ನರಳಾಡುತ್ತಿದ್ದ ಹಸುವನ್ನು ಉಳಿಸಲು ಮಂಜುನಾಥ ಹೆಬಸೂರು ಹಾಗೂ ಆತನ ಸಂಗಡಿಗರು ಪ್ರಯತ್ನ ನಡೆಸಿದರು. ಹಸುವಿಗೆ ಚಿಕಿತ್ಸೆ ಕೊಡಿಸಲು ಐದಾರು ಪಶು ವೈದ್ಯಾಧಿಕಾರಿಗಳಿಗೆ ಫೋನ್ ಕರೆ ಮಾಡಿದ್ದಾರೆ. ಆದ್ರೆ ವೈದ್ಯರು ಲಾಕ್ ಡೌನ್ ನೇಪ ಹೇಳಿ ಕೈತೊಳೆದುಕೊಂಡಿದ್ದಾರೆ.
ತಮ್ಮ ಕಣ್ಣುಂದೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಸುವಿನ ಜೀವನ ಉಳಿಸಲು ಯುವಕರು ಶತಪ್ರಯತ್ನ ಮಾಡಿದರು. ಆದರೆ, ತಲೆಗೆ ಗಂಭೀರ ಗಾಯವಾಗಿದ್ದ ಪರಿಣಾಮ ಹಸು ಮೃತಪಟ್ಟಿದೆ. ಯುವಕರ ಶ್ರಮಕ್ಕ ವೈದ್ಯರು ಮಾನವೀತೆ ತೋರಿದ್ದರೆ, ಹಸುವಿನ ಪ್ರಾಣ ಉಳಿಯುತ್ತಿತ್ತು.
ಆದರೆ, ವೈದ್ಯರ ಅಮಾನವೀಯತೆಗೆ ಹಸು ಪ್ರಾಣ ಕಳೆದುಕೊಂಡರೆ, ಯುವಕರು ಪ್ರಾಣ ಉಳಿಸಲಾಗಲಿಲ್ಲ ಎಂಬ ನೋವಿನಿಂದ ಮನೆ ಕಡೆ ಹೆಜ್ಜೆ ಹಾಕುವಂತೆ ಮಾಡಿತು.