ETV Bharat / city

ವಿದ್ಯುತ್​​​ ಶಾರ್ಟ್​​ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ... 45 ಎಕರೆ ಕಬ್ಬು ಭಸ್ಮ - sugarcane crop burnt due to short circuit in Dharwad

ವಿದ್ಯುತ್​ ಶಾರ್ಟ್​​ ಸರ್ಕ್ಯೂಟ್​ನಿಂದಾಗಿ ಕಟಾವಿಗೆ ಬಂದ ಕಬ್ಬು ಸುಟ್ಟು ಕರಕಲಾದ ಘಟನೆ ಧಾರವಾಡದಲ್ಲಿ ನಡೆದಿದ್ದು, ಹೆಸ್ಕಾಂ ವಿರುದ್ಧ ರೈತರು ಆಕ್ರೋಶ ವ್ಯಕ್ತಡಿಸಿದ್ದಾರೆ.

45 acre sugarcane crop burnt due to short circuit

author img

By

Published : Dec 19, 2021, 3:00 AM IST

ಧಾರವಾಡ : ವಿದ್ಯುತ್​ ಶಾರ್ಟ್​​ ಸರ್ಕ್ಯೂಟ್​​​​​ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ 45 ಎಕರೆ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ಧಾರವಾಡ ಸಮೀಪದ ದೇವರಹುಬ್ಬಳ್ಳಿಯಲ್ಲಿ ನಡೆದಿದೆ.

ಇಲ್ಲಿನ ತೆಂಬದ ಸೀಮೆಯ ಹೊಲಗಳಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತಲಿನ ಕಬ್ಬಿನ ಗದ್ದೆಗಳಿಗೆ ಆವರಿಸಿಕೊಂಡು, ತೀವ್ರ ಹಾನಿ ಮಾಡಿದ್ದು, ಸುಮಾರು 45 ಎಕರೆ ಕಬ್ಬು ಸುಟ್ಟು ಹೋಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ

ಇದನ್ನೂ ಓದಿರಿ: ಕೆಐಎ​​ನಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಕಾಮಗಾರಿ ವೀಕ್ಷಿಸಿದ ಸಚಿವ ಅಶ್ವತ್ಥನಾರಾಯಣ

ಮುಲ್ಲಾನವರ 15ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಸೇರಿದ ಜಮೀನುಗಳಲ್ಲಿನ ಕಬ್ಬು ಸುಟ್ಟು ಕರಕಲಾಗಿದೆ.ವಿಷಯ ತಿಳಿದು ಗ್ರಾಮಸ್ಥರು ಬೆಂಕಿ‌ ನಂದಿಸಲು ಯತ್ನಿಸಿದ್ದು, ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಟಾವಿಗೆ ಬಂದ ಕಬ್ಬು ಸುಟ್ಟು ಕರಕಲಾಗಿರುವ ಕಾರಣ ಹೆಸ್ಕಾಂ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.