ಹುಬ್ಬಳ್ಳಿ: ನಾಲ್ಕು ಕಾಲಿನ ಪ್ರಾಣಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ 4 ಕಾಲುಗಳುಳ್ಳ ಅಪರೂಪದ ಫಾರಂ ಕೋಳಿ ವಾಣಿಜ್ಯ ನಗರಿಯಲ್ಲಿ ಕಂಡು ಬಂದಿದ್ದು, ಪ್ರಕೃತಿಯ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದೆ.
ನಗರದ ಕುಸುಗಲ್ ರಸ್ತೆಯ ಎ.ಹೆಚ್ ಬಣಕಾರ ಚಿಕನ್ ಸ್ಟಾಲ್‍ನಲ್ಲಿ 4 ಕಾಲಿನ ಕೋಳಿ ಪತ್ತೆಯಾಗಿದೆ. ಈ ಅಪರೂಪದ ಕೋಳಿ ನೋಡಿ ಚಿಕನ್ ಸ್ಟಾಲ್ ಮಾಲೀಕ ಜಹೀದ ಅಚ್ಚರಿಗೊಂಡಿದ್ದಾರೆ. ಹೋಲ್ಸೇಲ್ ಕೋಳಿಗಳನ್ನು ಖರೀದಿಸಿದ್ದರು. ಬಾಕ್ಸ್ನಲ್ಲಿ ಈ 4 ಕಾಲಿನ ಕೋಳಿ ಪತ್ತೆಯಾಗಿದೆ.
ಈ ವಿಷಯ ಕೇಳಿದ ಜನರು ಕೋಳಿಯನ್ನು ನೋಡಲು ಜಮಾಯಿಸಿದ್ದರು. ಸದ್ಯ ಕೋಳಿಯ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ಈ ಅಪರೂಪದ ಕೋಳಿಯನ್ನು ಮಾರಾಟ ಮಾಡದೆ ಹಾಗೆಯೇ ಮಾಲೀಕ ತೆಗೆದಿಟ್ಟು, ರಕ್ಷಣೆ ಮಾಡಿದ್ದಾರೆ. ಕಳೆದ 50 ದಿನಗಳಿಂದ ನಾಲ್ಕು ಕಾಲಿನ ಕೋಳಿಯನ್ನು ಜಹೀದ್ ಅವರು ರಕ್ಷಣೆ ಮಾಡಿಕೊಂಡು ತಮ್ಮ ಚಿಕನ್ ಅಂಗಡಿಯಲ್ಲಿ ಇಟ್ಟುಕೊಂಡಿದ್ದಾರೆ.