ಹುಬ್ಬಳ್ಳಿ: ಸಾರಿಗೆ ಮುಷ್ಕರ ಆರಂಭದ ದಿನದಿಂದ ಕರ್ತವ್ಯಕ್ಕೆ ಗೈರಾಗಿರುವ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ ನೇಮಕಾತಿ ಪ್ರಾಧಿಕಾರಸ್ಥರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಮುಷ್ಕರ ಕೈ ಬಿಟ್ಟು ಕೊಡಲೇ ಕರ್ತವ್ಯಕ್ಕೆ ಹಾಜರಾಗುವಂತೆ, ಇಲ್ಲದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ತಿಳಿಸಿ ತರಬೇತಿ ನೌಕರರಿಗೆ ಶೋಕಾಸ್ ನೋಟಿಸ್ ಮತ್ತು ಮಾಧ್ಯುಮ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದರೂ ಸಹ ಇಂದಿನವರೆಗೆ ಕೆಲಸಕ್ಕೆ ಹಾಜರಾಗದೇ ಇರುವ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದರು.
ಇವರಲ್ಲಿ 15 ಚಾಲಕರು, 8 ಚಾಲಕ ಕಂ ನಿರ್ವಾಹಕರು, ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಕಿರಿಯ ಸಹಾಯಕ ಸೇರಿದ್ದಾರೆ ಎಂದರು.
ಘಟಕವಾರು ವಜಾಗೊಂಡ ಸಿಬ್ಬಂದಿಗಳ ವಿವರ:
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ 2, ಗ್ರಾಮಾಂತರ 2ನೇ ಘಟಕದ 2, ಗ್ರಾಮಾಂತರ 3ನೇ ಘಟಕದ 1, ನವಲಗುಂದ ಘಟಕದ 6 ಮತ್ತು ಕಲಘಟಗಿ ಘಟಕದ 17 ತರಬೇತಿ ಸಿಬ್ಬಂದಿಗಳನ್ನು ಆಯ್ಕೆ ಪಟ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ.
ಅಲ್ಲದೆ ವಜಾಗೊಂಡಿರುವ ಸಿಬ್ಬಂದಿ ಸಂಸ್ಥೆಯಲ್ಲಿ ಕಾಯಂ ನೇಮಕಾತಿ ಹಕ್ಕನ್ನು ಸಹ ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್ ಹತ್ತಿದವರು ಖಾಸಗಿ ಬಸ್ಗೆ ಶಿಫ್ಟ್... ಮೂಕ ಪ್ರೇಕ್ಷಕರಾದ ಪೊಲೀಸರು, ಅಧಿಕಾರಿಗಳು