ದಾವಣಗೆರೆ: ಬಿಎಸ್ವೈ ರಾಜೀನಾಮೆ ಹಿನ್ನೆಲೆಯಲ್ಲಿ ಲಿಂಗಾಯತ ಮತಗಳು ಬದಲಾವಣೆ ಆಗಲ್ಲ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಕೇವಲ ಆರು ಸೀಟು ಗೆದ್ದಿದ್ದರು, ನಾವೆಲ್ಲ ಲಿಂಗಾಯತರು ಬಿಜೆಪಿಯಲ್ಲೇ ಇದ್ದು ನಲವತ್ತು ಸ್ಥಾನ ಗೆದ್ದಿದ್ದೆವು ಎಂದು ಉತ್ತರ ಮತ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.
ಜಿಲ್ಲೆಯ ಶಿರಮಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮತಗಳು ಅವರ ಕಡೆ ಇದ್ದಿದ್ದರೆ ಕೆಜೆಪಿಯಿಂದ ಜಾಸ್ತಿ ಸೀಟು ಗೆಲ್ಲಬೇಕಿತ್ತು, ಆದ್ರೆ ಆಗಲಿಲ್ಲ. ಎರಡು ವರ್ಷದ ನಿಯಮದಂತೆ ಬಿಎಸ್ವೈ ರಾಜೀನಾಮೆ ನೀಡಿದ್ದಾರೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
'ನೂತನ ಸಿಎಂ ಬಂದ್ರೆ ಅವರಿಗೂ ಸ್ವಾಮೀಜಿ ಬೆಂಬಲ ನೀಡ್ತಾರೆ'
ಶಾಮನೂರು ಶಿವಶಂಕರಪ್ಪರಿಂದಾಗಿ ಸ್ವಾಮೀಜಿಗಳು ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದಾರೆ. ನೂತನ ಸಿಎಂ ಬಂದ್ರೆ ಅವರಿಗೂ ಕೂಡ ಹಾರ ಹಾಕಿ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಟಾಂಗ್ ಕೊಟ್ಟರು.
'ಇನ್ಮುಂದೆ ನಾವು ಅನುದಾನ ತರುತ್ತೇವೆ'
ರೇಣುಕಾಚಾರ್ಯ ಯಡಿಯೂರಪ್ಪನವರ ಮಾನಸ ಪುತ್ರ. ಬಿಎಸ್ವೈ ಅವರಿಗೆ ಜಾಸ್ತಿ ಅನುದಾನ ಕೊಟ್ಟಿದ್ದಾರೆ. ಇನ್ಮುಂದೆ ನಾವು ಹೆಚ್ಚು ಅನುದಾನ ತರುತ್ತೇವೆ ಎಂದು ಸವಾಲೆಸೆದರು.
'ನಾನು ಸೀನಿಯರ್'
ನಾನು ಐದು ಸಾರಿ ಸೋತು ಐದು ಸಾರಿ ಗೆದ್ದಿದ್ದೇನೆ. ಸಚಿವ ಸ್ಥಾನಕ್ಕೆ ಸೀನಿಯಾರಿಟಿ ಇದೆ. ಪಾರ್ಟಿ ನಿರ್ಣಯಕ್ಕೆ ಬದ್ದವಾಗಿದ್ದೇನೆ. ಯಾವುದೇ ಸ್ಥಾನ ಕೊಟ್ರೂ ಕೆಲಸ ಮಾಡ್ತೀನಿ. ಸಿಎಂ ರೇಸ್ನಲ್ಲಿ ಜೋಶಿ, ನಿರಾಣಿ, ಕತ್ತಿ, ಶೆಟ್ಟರ್ ಹೆಸರುಗಳಿವೆ. ಹೊಸಬರು ಎಂದರೆ ಸಂತೋಷ್ ಅವರೇ ಇದ್ದಾರೆ ಎಂದು ಹೇಳಿದರು.