ETV Bharat / city

ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ ಪ್ರಕರಣ: ಕೊಲೆ ಶಂಕೆ - ದಾವಣಗೆರೆ

ದಾವಣಗೆರೆ ಹೊರವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆಯಾಗಿದೆ. ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

davanagere
ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ
author img

By

Published : Jul 30, 2021, 9:43 AM IST

Updated : Jul 30, 2021, 7:16 PM IST

ದಾವಣಗೆರೆ: ಅವರು ಬಳ್ಳಾರಿ ಜಿಲ್ಲೆ ಮೂಲದವರು, ಐವರು ಹೆಣ್ಣು ಮಕ್ಕಳಿಂದ ಕೂಡಿದ್ದ ಸಂಸಾರ, ಅದರೆ 10 ವರ್ಷಗಳ ಹಿಂದೆ ಹಿರಿಯ ಮಗಳ ಕೊಲೆಯಾಗಿತ್ತು. ಇದೀಗ ಮತ್ತಿಬ್ಬರು ಹೆಣ್ಣು ಮಕ್ಕಳೂ ಕೂಡ ಕೊನೆಯುಸಿರೆಳೆದಿದ್ದಾರೆ. ಕರಳಿನ ಕುಡಿಗಳನ್ನು ಕಳೆದುಕೊಂಡಿರುವ ತಾಯಿಯು ಇದೊಂದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ ಪ್ರಕರಣ

ದಾವಣಗೆರೆ ಹೊರವಲಯದಲ್ಲಿರುವ ಆಂಜನೇಯ ಮಿಲ್​ನಲ್ಲಿ ಕೆಲಸ ಮಾಡುತ್ತ, ಆಂಜನೇಯ ಮಿಲ್ ಬಡಾವಣೆಯಲ್ಲಿ ಜೀವನ ಸಾಗಿಸುತ್ತಿದ್ದ ಗೌರಮ್ಮ ಹಾಗು ರಾಧಮ್ಮ ಎಂಬಿಬ್ಬರು ಸಹೋದರಿಯರು ಶವವಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೆನಕನಹಳ್ಳಿಯ ಹಂಪಮ್ಮ ಎಂಬುವರ ಮಕ್ಕಳಿವರು. ಇವರಲ್ಲಿ ರಾಧಮ್ಮ ತನ್ನ ಗಂಡನಿಗೆ ವಿಚ್ಛೇದನ ನೀಡಿ ಅಕ್ಕ ಗೌರಮ್ಮಳೊಂದಿಗೆ ವಾಸವಿದ್ದಳು. ಗೌರಮ್ಮ ಕೂಡ ಗಂಡ ಮಂಜುನಾಥ್​ ಜೊತೆ ಆಗಾಗ ಜಗಳವಾಗುತ್ತಿದ್ದ ಹಿನ್ನೆಲೆ ವಿಚ್ಛೇದನ ನೀಡಬೇಕೆಂದು ನಿರ್ಧರಿಸಿದ್ದಳು. ಆದರೆ ಇನ್ನೂ ವಿಚ್ಛೇದನ ನೀಡಲಾಗಿರಲಿಲ್ಲ.

ಹೀಗೆ ಒಂದೇ ಮನೆಯಲ್ಲಿದ್ದು ಸಹೋದರಿಯರಿಬ್ಬರೂ ಶವವಾಗಿದ್ದು, ಕಳೆದ ಒಂದು ವಾರದ ಹಿಂದೆ ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಮನೆಯಿಂದ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ಅಕ್ಕ-ತಂಗಿಯರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಜರುಗಿ ಮೂರರಿಂದ ನಾಲ್ಕು ದಿನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂಜುನಾಥ್ ಮೇಲೆ ಶಂಕೆ:

davanagere
ಮಂಜುನಾಥ್ ಮೇಲೆ ಶಂಕೆ

ಆಗಾಗ ಮನೆಗೆ ಬಂದು ಹೋಗುತ್ತಿದ್ದ ಗೌರಮ್ಮಳ ಗಂಡ ಮಂಜುನಾಥ್ ಮೇಲೆ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ವಾರ ಮಂಜುನಾಥ್ ಈ ಸಹೋದರಿಯರ ಮನೆಯಲ್ಲೇ ಇದ್ದ ಎಂದು ಅಕ್ಕಪಕ್ಕದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿದ್ಯಾನಗರ ಠಾಣೆಯ ಪೋಲಿಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated : Jul 30, 2021, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.