ಹರಿಹರ: ಟ್ರ್ಯಾಕ್ಟರ್ ಪಲ್ಟಿಯಾಗಿ 15 ಜನ ಕೂಲಿ ಕಾರ್ಮಿಕರು ಗಾಯಗೊಂಡ ಘಟನೆ ತಾಲೂಕಿನ ಗುತ್ತೂರು ಸಮೀಪ ನಡೆದಿದೆ.
ಭಾನುವಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಭತ್ತದ ನಾಟಿಗೆಂದು ಗುತ್ತೂರು ಬಳಿಯ ಜಮೀನಿಗೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ, ಹರಪನಹಳ್ಳಿ ಹೆದ್ದಾರಿಯನ್ನು ದಾಟಿ ಜಮೀನಿಗೆ ಹೋಗುವ ಮಾರ್ಗ ಮಧ್ಯ ಟ್ರಾಕ್ಟರ್ ಪಲ್ಟಿಯಾಗಿದೆ.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.