ದಾವಣಗೆರೆ : ಸಿನಿಯಾರಿಟಿ ಲೆಕ್ಕ ಹಾಕಿದ್ರೆ ರಾಜ್ಯದಲ್ಲಿ ನಾನೇ ಮೊದಲಿಗ. ಸಚಿವ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಎಸ್ ಎ ರವೀಂದ್ರನಾಥ್ ತಿಳಿಸಿದರು.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡದೇ ಇದ್ದರೆ ಬೇಜಾರಿಲ್ಲ. ಯಾವುದೇ ಲಾಬಿ ಮಾಡಲ್ಲ ಎಂದು ಪರೋಕ್ಷವಾಗಿ ಹಿರಿಯರಿಗೆ ಆದ್ಯತೆ ನೀಡಿ ಎಂದು ಹೇಳಿಕೆ ನೀಡಿದರು. ಇನ್ನು, ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರಬೇಕು. ಜಿಲ್ಲೆಗೊಂದು ಸಚಿವ ಸ್ಥಾನಕ್ಕೆ 5 ಮಂದಿ ಶಾಸಕರಲ್ಲಿ ಯಾರಿಗಾದರೂ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೇವೆ ಎಂದರು.
ದಾವಣಗೆರೆಗೆ ಸಚಿವ ಸಿಗೋದು ಪಕ್ಕಾ : ಈ ಬಾರಿ ದಾವಣಗೆರೆ ಜಿಲ್ಲೆಯ ಐದು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದು ಶಾಸಕ ರವೀಂದ್ರನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಕೇಂದ್ರದ ವರಿಷ್ಠರು ಸಚಿವ ಸ್ಥಾನಕ್ಕೆ ಯಾವ ಮಾನದಂಡ ಅನುಸರಿಸುತ್ತಾರೋ ಗೊತ್ತಿಲ್ಲ. ನಮ್ಮಲ್ಲಿ ಹಲವು ಹಿರಿಯರು ಇದ್ದರೂ, ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ರು. ಈ ಹಿನ್ನೆಲೆ ಸಿನಿಯಾರಿಟಿ ಲೆಕ್ಕಕ್ಕೆ ಬರುತ್ತದೆಯೋ, ಇಲ್ಲವೋ ಗೊತ್ತಿಲ್ಲ ಎಂದರು.
ಮಿತ್ರ ಮಂಡಳಿ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು : ಮಿತ್ರ ಮಂಡಳಿ ಶಾಸಕರಿಂದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ. ಮಾತು ಕೊಟ್ಟಂತೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಿತ್ರಮಂಡಳಿ ಶಾಸಕರ ಪರ ಬ್ಯಾಟ್ ಬೀಸಿದರು.