ETV Bharat / city

ಮರೆಯಾದ ಯುವರತ್ನ: ಖಿನ್ನತೆಗೊಳಗಾಗಿ ನೇಣಿಗೆ ಶರಣಾದ ಅಭಿಮಾನಿ - ದಾವಣಗೆರೆ ಲೇಟೆಸ್ಟ್ ನ್ಯೂಸ್

ಈತ ಪುನೀತ್ ರಾಜ್​​ಕುಮಾರ್ ನಿಧನದ ದಿನದಿಂದ ಖಿನ್ನತೆಗೆ ಒಳಗಾಗಿದ್ದನು. ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವು ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದೆ..

puneeth rajkumar fan committed suicide
ಪುನೀತ್ ರಾಜ್‍ಕುಮಾರ್ ಅಭಿಮಾನಿ ಆತ್ಮಹತ್ಯೆ
author img

By

Published : Nov 3, 2021, 8:54 AM IST

ದಾವಣಗೆರೆ : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಅಗಲಿ ಐದಾರು ದಿನಗಳು ಕಳೆದಿವೆ. ರಾಜ್ಯದ ಜನತೆ ಶೋಕದಲ್ಲಿ ಮುಳುಗಿದ್ದಾರೆ. ಅಭಿಮಾನಿಗಳು ಆ ಶಾಕ್​ನಿಂದ ಹೊರ ಬಂದಿಲ್ಲ. ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿವೆ. ದಾವಣಗೆರೆಯ ಅಭಿಮಾನಿ ಮರೆಯಾದ ರಾಜಕುಮಾರನ ನೆನಪಲ್ಲಿ ಖಿನ್ನತೆಗೊಳಗಾಗಿ ನೇಣಿಗೆ ಶರಣಾದ್ದಾನೆ.

ದಾವಣಗೆರೆಯ ವಿಜಯನಗರ ಬಡಾವಣೆಯಲ್ಲಿ ಘಟನೆ ಜರುಗಿದ್ದು, ಸಿ. ಕುಮಾರ್ (25) ಮೃತ ಯುವಕ. ಅಪ್ಪು ಸಾವಿನಿಂದ ಕೊರಗಿ ನೇಣಿಗೆ ಶರಣಾಗಿದ್ದಾನೆ. ಯುವಕ ಸಿ. ಕುಮಾರ್ ದಿ. ಪುನೀತ್ ರಾಜ್​​ಕುಮಾರ್ ಅವ್ರ ಅಪ್ಪಟ ಅಭಿಮಾನಿಯಾಗಿದ್ದರು ಎಂದು ತಿಳಿದು ಬಂದಿದೆ.

ಪುನೀತ್‌ ರಾಜ್​ಕುಮಾರ್​ ಒಂದೂ ಸಿನಿಮಾವನ್ನೂ ಬಿಡದೇ ನೋಡುತ್ತಿದ್ದ ಈತ ಪುನೀತ್ ರಾಜ್​​ಕುಮಾರ್ ನಿಧನದ ದಿನದಿಂದ ಖಿನ್ನತೆಗೆ ಒಳಗಾಗಿದ್ದನು. ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವು ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪುನೀತ್​ ಅಭಿಮಾನಿ ಆತ್ಮಹತ್ಯೆಗೆ ಶರಣು

ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.