ದಾವಣಗೆರೆ: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಇನ್ನೂ ಸಂಪೂರ್ಣ ಅಂತ್ಯ ಕಂಡಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಧರ್ಮವೊಂದರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ. ಈ ಹಿನ್ನೆಲೆ ಹರಿಹರ ನಗರ ಪೊಲೀಸ್ ಠಾಣೆಯೆದುರು ಒಂದು ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿಹರ ಪಟ್ಟಣದ ಮಾರುತಿ ಎಂಬ ಯುವಕ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಇದನ್ನು ಖಂಡಿಸಿ ಹರಿಹರ ನಗರ ಠಾಣೆ ಎದುರು ಅನ್ಯಧರ್ಮದವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 62 ಮಂದಿ ಪ್ರೊಬೇಷನರಿ ಗ್ರೇಡ್-2 ತಹಶೀಲ್ದಾರ್ಗಳ ವರ್ಗಾವಣೆ
ಪೊಲೀಸ್ ವಾಹನದ ಗಾಜು ಕೂಡ ಜಖಂಗೊಳಿಸಿರುವ ಘಟನೆ ಕೂಡ ಪ್ರತಿಭಟನೆ ವೇಳೆ ನಡೆದಿದೆ. ಪ್ರತಿಭಟನಾಕಾರನ್ನು ನಿಯಂತ್ರಿಸಲು ಪೊಲೀಸರು ಹರಸಾಹ ಪಡುವಂತಾಯಿತು. ಸೋಮವಾರ ಸಂಜೆ ಹರಿಹರ ಪೊಲೀಸ್ ಠಾಣೆಯಲ್ಲಿ ಎರಡೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಪ್ರಕರಣ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ.