ದಾವಣಗೆರೆ: ನಗರದ ಜನರು ಆಟೋ ಬಸ್ ಹಿಡಿಯದೇ ಸುಲಭವಾಗಿ ಸಂಚರಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಬೈಸಿಕಲ್ ಯೋಜನೆ ಜಾರಿಗೆ ತಂದು ವರ್ಷಗಳೇ ಉರುಳಿವೆ. ನಗರದ 18 ಕಡೆ ಕೂ ಬೈಸಿಕಲ್ ಪಾಯಿಂಟ್ ನಿರ್ಮಿಸಿ 100 ಸಾಮಾನ್ಯ ಬೈಸಿಕಲ್ ಹಾಗೂ 100 ಎಲೆಕ್ಟ್ರಿಕಲ್ ಬೈಸಿಕಲ್‌ಗಳನ್ನು ಜಾರಿಗೆ ತರಲಾಗಿತ್ತು. ಪರಿಸರ ಸ್ನೇಹಿಯ ಈ ಯೋಜನೆ ಜಾರಿಗೆ ತಂದು ಸಾಕಷ್ಟು ದಿನಗಳ ಉರುಳಿರುವ ಬೆನ್ನಲ್ಲೇ ಬೈಸಿಕಲ್‌ಗಳ ಸೇವೆ ಯಾರಿಗೂ ಬೇಡ ಎನಿಸಿದೆ.
ಈ ಬೈಸಿಕಲ್‌ಗಳನ್ನು ವಿದ್ಯಾರ್ಥಿಗಳು, ಜನಸಾಮಾನ್ಯರು ಉಪಯೋಗಿಸುತ್ತಿದ್ದರು. ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್ ಹೊಡೆತಕ್ಕೆ ಬೈಸಿಕಲ್‌ಗಳು ಇದೀಗ ನಿಂತ ಜಾಗದಲ್ಲೇ ನಿಂತಿವೆ. ಶಾಲಾ ಕಾಲೇಜುಗಳು ಬಂದ್ ಆಗಿರುವುದ್ದರಿಂದ ಈ ಬೈಸಿಕಲ್‌ಗಳನ್ನು ಉಪಯೋಗಿಸುವರಿಲ್ಲದೇ ಹಾಗೇ ನಿಂತಿವೆ. ಈ ಬೈಸಿಕಲ್ ಉಪಯೋಗದಿಂದ ಇಂಧನ ಉಳಿತಾಯ ಮಾಡಬಹುದಾಗಿದ್ದು, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಪ್ಪಿಸಬಹುದಾದ ದೃಷ್ಟಿಯಿಂದ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಇದರ ಪೋಷಣೆ ಮಾಡುವ ಜವಾಬ್ದಾರಿ ಮಾತ್ರ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜವಾಬ್ದಾರಿಯಾಗಿದೆಯಂತೆ
ಬೈಸಿಕಲ್‌ನ ವಿಶೇಷತೆ ಏನು..?
ಈ ಬೈಸಿಕಲ್‌ನಲ್ಲಿ GPRS, ಟ್ರ್ಯಾಕಿಂಗ್, ಮೊಬೈಲ್ ಅಪ್ಲಿಕೇಶನ್ ಅಳವಡಿಸಲಾಗಿದೆ. ಅಲ್ಯೂಮಿನಿಯಂ ಅಲಾಯ್ ಹಾಗೂ ಥ್ರೂ ಫ್ರೇಮ್ ಎಂಬ ಎರಡು ರೀತಿಯ ಬೈಸಿಕಲ್‌ಗಳಿದ್ದು, ವಿದ್ಯುನ್ಮಾನ ನಿಯಂತ್ರಿತ ಹಬ್ ಮೋಟರ್ ಪೆಡಲದ ಅಥವಾ ಎಕ್ಸಿಲೇಟರ್ ಮೂಲಕ ಚಲಾವಣೆಗೆ, ಬ್ಯಾಟರಿ ಪ್ಯಾಕ್, ಬ್ರೇಕ್ ಲಿಮಿವರ್, ಡ್ರಮ್ ಬ್ರೇಕ್ ಸ್ಮಾರ್ಟ್ ಲಾಕ್, ಸೋಲಾರ್ ಚಾರ್ಜಿಂಗ್, ಟ್ಯೂಬ್ ಲೆಸ್ ಟೈಯರ್‌ಗಳು ಈ ಬೈಸಿಕಲ್‌ನ ವಿಶೇಷತೆಗಳು. ಇಷ್ಟು ವಿಶೇಷತೆ ಹೊಂದಿದ್ದರು ಕೂಡ ಬಳಕೆಗೆ ಮಾತ್ರ ಜನರು ಹಿಂದೇಟು ಹಾಕುತ್ತಿದ್ದಾರೆ.
ಬೈಸಿಕಲ್ ಸವಾರರು ತಮ್ಮ ಪ್ರಯಾಣ ಶುರು ಮಾಡಿವ ಮುನ್ನ ರಿಜಿಸ್ಟ್ರೇಷನ್ ಮಾಡಿಸಬಹುದಾಗಿದೆ. ರಿಜಿಸ್ಟ್ರೇಷನ್ ಮಾಡಿಸಿದೆ. ಆದಲ್ಲಿ ಮೊದಲ 30 ನಿಮಿಷ ಹಾಗೂ ಇ ಬೈಸಿಕಲ್‌ನಲ್ಲಿ 15 ನಿಮಿಷ ಉಚಿತವಾಗಿ ಲಭ್ಯವಾಗಲಿದೆ. 30 ನಿಮಿಷಕ್ಕೆ 30 ರೂ. ಹಾಗೂ ಇ ಬೈಸಿಕಲ್‌ಗೆ 15 ರೂ. ಕಡಿಮೆ ದರದ ಬಾಡಿಗೆ ನಿಗದಿ ಮಾಡಲಾಗಿದ್ದರು ಕೂಡ ಜನ ಮಾತ್ರ ಬಳಕೆಗೆ ಮನಸು ಮಾಡುತ್ತಿಲ್ಲ.