ETV Bharat / city

ಫ್ರಾನ್ಸ್​​ನಿಂದ ದಾವಣಗೆರೆಗೆ ಬಂದಿದ್ದ ವೈದ್ಯನಿಗೆ ಕೊರೊನಾ ಸೋಂಕು ದೃಢ: ಜಿಲ್ಲಾಧಿಕಾರಿ ಬೀಳಗಿ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇತ್ತ, ದಾವಣಗೆರೆ ಜಿಲ್ಲೆಯಲ್ಲಿ ಫ್ರಾನ್ಸ್​​ನಿಂದ ನಗರಕ್ಕೆ ಆಗಮಿಸಿದ್ದ ವೈದ್ಯನಿಗೆ ಕೋವಿಡ್​​​-19 ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್​. ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

one-more-corona-virus-effected-person-find-in-davanagere
ಜಿಲ್ಲಾಧಿಕಾರಿ ಮಾಹಂತೇಶ ಆರ್. ಬೀಳಗಿ
author img

By

Published : Mar 27, 2020, 8:26 PM IST

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ವೈರಸ್​ ಪ್ರಕರಣ ದೃಢಪಟ್ಟಿದೆ. ಮಾರ್ಚ್​​ 22 ರಂದು ಫ್ರಾನ್ಸ್​​ನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯನ್ನು 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ವ್ಯಕ್ತಿಯ ವೈದ್ಯಕೀಯ ವರದಿ ಬಂದಿದ್ದು, ಕೋವಿಡ್​​​-19 ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಾಂತೇಶ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಉನ್ನತ ಅಧ್ಯಯನಕ್ಕೆ ಫ್ರಾನ್ಸ್​ಗೆ ತೆರಳಿದ್ದ ವ್ಯಕ್ತಿಗೆ ಮಾರ್ಚ್ 25 ರಂದು ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿತ್ತು. ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಶಿವಮೊಗ್ಗದ ಪ್ರಯೋಗಾಲಯಕ್ಕೆ ಗಂಟಲು ದ್ರವ ಪರೀಕ್ಷೆಗೆಂದು ಕಳುಹಿಸಲಾಗಿದ್ದು, ಈಗ ಪಾಸಿಟಿವ್ ಬಂದಿದೆ.

one-more-corona-virus-effected-person-find-in-davanagere
ಸೋಂಕಿತನ ಚಲನವಲನ

ಸೋಂಕಿತನ ಚಲನವಲನ:

ಮಾರ್ಚ್​ 17 ಬೆಳಗ್ಗೆ 11:30ಕ್ಕೆ ಫ್ರಾನ್ಸ್​ನ ಪ್ಯಾರೀಸ್​ನಿಂದ ಅಬುದಾಬಿ ಮೂಲಕ ಪ್ರಯಾಣ ಬೆಳೆಸಿ 18ನೇ ತಾರೀಖಿನಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ಬಂದಿಳಿದಿದ್ದ. ಮೆಜೆಸ್ಟಿಕ್​ ಬಸ್ ನಿಲ್ದಾಣಕ್ಕೆ 8 ಗಂಟೆಗೆ ಆಗಮಿಸಿದ್ದರು. ಅಂದು ರಾತ್ರಿ 10 ಗಂಟೆಗೆ ಮೆಜೆಸ್ಟಿಕ್ ನಿಂದ ರಾಜಹಂಸ ಬಸ್ ಹತ್ತಿದ್ದ. ಮಧ್ಯಾಹ್ನ ನಾಲ್ಕು ಗಂಟೆಗೆ ದಾವಣಗೆರೆಗೆ ಆಗಮನ.

ದಾವಣಗೆರೆ ಬಸ್ ನಿಲ್ದಾಣದಿಂದ ಮನೆಗೆ ಸ್ವಂತ ಕಾರಿನಲ್ಲಿ ತೆರಳಿದ್ದ. ಸೋಂಕಿತನ ತಂದೆಯೇ ಕರೆದುಕೊಂಡು ಹೋಗಿದ್ದರು. ಫ್ರಾನ್ಸ್ ಗೆ ಓದಲು ಈ ಯುವಕ ಹೋಗಿದ್ದ. ಆತನಿಗೆ ಬಸ್ ನಂಬರ್ ನೆನಪಿಲ್ಲ, ಉಳಿದಂತೆ ಆತ ಓಡಾಡಿದ್ದ ಸ್ಥಳದಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ವಿವರಣೆ ನೀಡಿದ್ರು.

ಫ್ರಾನ್ಸ್ ನಿಂದ ಬಂದಿದ್ದ ವೈದ್ಯ, ಎಲ್ಲಿಯೂ ಹೊರ ಹೋಗಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಕೊರೊನಾ ಗುಣಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆಗೆ ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈತ ಮನೆಯ ಮೂರ ಕಿಲೋಮೀಟರ್ ಸುತ್ತ ಜಾಗೃತಿ ವಹಿಸಲಾಗುತ್ತದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಡಿ ಸಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.