ETV Bharat / city

ಹಿಜಾಬ್ ಇಲ್ಲದೇ ನಾವು ಕಾಲೇಜ್ ಗೆ ಹೋಗಲ್ಲ.. ದಾವಣಗೆರೆಯಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ - hijab controversy ,high court verdict

ವಿದ್ಯಾರ್ಥಿಗಳೆಲ್ಲರೂ ಸರ್ಕಾರದ ಆದೇಶದಂತೆ ಸಮವಸ್ತ್ರ ಧರಿಸಿ ಶಾಲಾ-ಕಾಲೇಜುಗಳಿಗೆ ತೆರಳುವಂತೆ ಮಂಗಳವಾರ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಆದ್ರೆ ತಮಗೆ ಹಿಜಾಬ್​ ಮುಖ್ಯವೆಂದು ಕೆಲವರು ಹಠಕ್ಕೆ ಬಿದ್ದಿದ್ದಾರೆ. ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಪೋಸ್ಟರ್ ಪ್ರದರ್ಶಿಸಿದ್ದಾರೆ.

muslim students protesting against the court verdict in davanagere
ನಾವು ಹಿಜಾಬ್ ಇಲ್ಲದೇ ನಾವು ಕಾಲೇಜ್ ಗೆ ಹೋಗಲ್ಲ, ವಿದ್ಯಾರ್ಥಿನಿಯರಿಂದ ಪ್ರತಿಭಟನೆ
author img

By

Published : Mar 16, 2022, 3:27 PM IST

ದಾವಣಗೆರೆ: ನಾವು ಹಿಜಾಬ್ ಇಲ್ಲದೇ ಕಾಲೇಜ್ ಗೆ ಹೋಗಲ್ಲ ಎಂದು ಕಾಲೇಜಿಗೆ ರಜೆ‌ ಇದ್ದರೂ ಇಲ್ಲಿನ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನಗರದ ಪ್ರಥಮ ದರ್ಜೆ ಕಾಲೇಜು ಬಳಿ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಹೈಕೋರ್ಟ್​ ತೀರ್ಪನ್ನು ಬೆನ್ನಲ್ಲೇ ನಾಲ್ವರು‌ ವಿದ್ಯಾರ್ಥಿನಿಯರು ಪೋಸ್ಟರ್ ಹಿಡಿದುಕೊಂಡು ಕಾಲೇಜಿನ ಎದುರು ಪ್ರತಿಭಟಿಸಿದ್ದಾರೆ.

ಬೆಣ್ಣೆ ನಗರಿಯ ಸರ್ಕಾರಿ ಪದವಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ನಮಗೆ ಶಿಕ್ಷಣ ಎಷ್ಟು ಮುಖ್ಯವೋ, ನಮ್ಮ ಧರ್ಮವೂ ಅಷ್ಟೇ ಮುಖ್ಯ. ಆದ್ದರಿಂದ ನಾನು ಹಿಜಾಬ್ ತೆಗೆದು ಕಾಲೇಜಿಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ.

ಹಿಜಾಬ್ ಇಲ್ಲದೇ ನಾವು ಕಾಲೇಜ್ ಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರಿಂದ ಪ್ರತಿಭಟನೆ...

ಅಮಿತ್ ಶಾ ಮಧ್ಯಸ್ಥಿಕೆಗೆ ಒತ್ತಾಯ: ಈ ಹಿಂದೆ ಶಬರಿಮಲೆಯಲ್ಲಿ ಕೆಲ ವಿಚಾರ ಚರ್ಚೆಗೆ ಬಂದಿದ್ದವು. ಆಗ ಧಾರ್ಮಿಕ ವಿಚಾರಗಳಲ್ಲಿ ಕೋರ್ಟ್ ಪ್ರವೇಶ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದೀಗ ಹಿಜಾಬ್​ ವಿಚಾರದಲ್ಲೂ ಅಮಿತ್ ಶಾ ಅವರು ಮಧ್ಯ ಪ್ರವೇಶ ಮಾಡಿ ಬೆಂಬಲ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಹೈಕೋರ್ಟ್ ತೀರ್ಪು ಬರುವ ತನಕ ಕಾಲೇಜ್ ನ ಮುಖ್ಯಸ್ಥರ ಮಾತು ಕೇಳಿ ಹಿಜಾಬ್ ತೆಗೆದು ಕೆಲ ಪರೀಕ್ಷೆಗಳಿಗೆ ಹಾಜರಾಗಿದ್ದೆವು. ನಮಗೆ ನ್ಯಾಯ ಸಿಗುವ ತನಕ ನಾವು ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರು ಇದೇ ವೇಳೆ ತಿಳಿಸಿದ್ದಾರೆ.

ಓದಿ : ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆಪ್​ನ ಭಗವಂತ್​ ಮಾನ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.