ETV Bharat / city

ಆಸ್ತಿಗಾಗಿ ಅತ್ತೆಯನ್ನು ಕೊಲೆಗೈದಿದ್ದ ಅಳಿಯನಿಗೆ ಜೀವಾವಧಿ ಶಿಕ್ಷೆ - Son-In-Law Sentenced To Life in davanagere

2019ರ ಜುಲೈ 18ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಾರೆ. ಈಕೆಯನ್ನು ಸುಮ್ಮನೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದು ಅಭಿರಾಜ್ ಮಚ್ಚಿನಿಂದ ಭಾಗ್ಯಮ್ಮ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ. ಅಂದಿನ ಸಿಪಿಐ ಉಮೇಶ್ ಜಿ ಬಿ ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು..

davanagere
ದಾವಣಗೆರೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ
author img

By

Published : Mar 30, 2022, 5:09 PM IST

ದಾವಣಗೆರೆ : ಆಸ್ತಿಗಾಗಿ ಅತ್ತೆಯನ್ನು ಕೊಲೆ ಮಾಡಿದ್ದ ಅಳಿಯನಿಗೆ ದಾವಣಗೆರೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿದೆ. ದಾವಣಗೆರೆಯ ಹೊಂಡದ ಸರ್ಕಲ್‌ನ ಅಭಿರಾಜ್ ಶಿಕ್ಷೆಗೆ ಒಳಗಾದ ಅಪರಾಧಿ. ಆತನ ಅತ್ತೆ ಭಾಗ್ಯಮ್ಮ ಕೊಲೆಯಾಗಿದ್ದ ಮಹಿಳೆ.

ಪ್ರಕರಣದ ಹಿನ್ನೆಲೆ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಹನುಮಂತಪ್ಪ ಅವರ ಪುತ್ರಿ ಭಾಗ್ಯಮ್ಮ ಅವರು 14 ವರ್ಷಗಳ ಹಿಂದೆ ದಾವಣಗೆರೆಯ ಶಿವಕುಮಾರ್ ಜತೆಗೆ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮದ್ಯ ವ್ಯಸನ ಚಟದಿಂದಾಗಿ ಶಿವಕುಮಾರ್ ಅವರು ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಭಾಗ್ಯಮ್ಮ ಮಗಳನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಗಂಡನ ಸ್ವಂತ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದರು.

ಶಿವಕುಮಾರ್ ಅವರ ಅಕ್ಕನ ಮಗನಾದ ಅಭಿರಾಜ್‌ ಭಾಗ್ಯಮ್ಮ ಅವರ ಹಿಂದಿನ ಮನೆಯಲ್ಲೇ ವಾಸವಾಗಿದ್ದ. ಭಾಗ್ಯಮ್ಮ ವಾಸವಿರುವ ಮನೆಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅವರ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದ. ಭಾಗ್ಯಮ್ಮ ಮನೆಗೆ ಬೇರೆ ಬೇರೆ ಗಂಡಸರು ಬಂದು ಹೋಗುತ್ತಿದ್ದಾರೆ ಎಂದು ಆಕೆಯ ತಾಯಿ ಹಾಗೂ ಅಣ್ಣನ ಬಳಿ ಚಾಡಿ ಹೇಳುತ್ತಿದ್ದ.

2019ರ ಜುಲೈ 18ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಾರೆ. ಈಕೆಯನ್ನು ಸುಮ್ಮನೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದು ಅಭಿರಾಜ್ ಮಚ್ಚಿನಿಂದ ಭಾಗ್ಯಮ್ಮ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ. ಅಂದಿನ ಸಿಪಿಐ ಉಮೇಶ್ ಜಿ ಬಿ ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ. ವಿಜಯಾನಂದ ಅವರು ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.