ದಾವಣಗೆರೆ : ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ ಪಿ ರೇಣುಕಾಚಾರ್ಯ ಸದಾ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಮಾರ್ಗಮಧ್ಯೆ ಪಂಕ್ಚರ್ ಆಗಿದ್ದ ಆ್ಯಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಹೊನ್ನಾಳಿ ನಗರದ ನ್ಯಾಮತಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಆ್ಯಂಬುಲೆನ್ಸ್ಗೆ ಟೈಯರ್ ಬದಲಿಸಲು ನೆರವಾದರು. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಜಿಲ್ಲೆಯ ನ್ಯಾಮತಿ ರಸ್ತೆ ಮಾರ್ಗವಾಗಿ ಶಾಸಕ ರೇಣುಕಾಚಾರ್ಯ ಆಗಮಿಸುತ್ತಿರುವ ವೇಳೆ ಅದೇ ಮಾರ್ಗದಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದ್ದನ್ನು ಗಮನಿಸಿದರು. ಕೂಡಲೇ ತಮ್ಮ ವಾಹನ ನಿಲ್ಲಿಸಿ, ಜಾಕ್ ನೀಡಿ ಖುದ್ದು ಸ್ಥಳದಲ್ಲಿ ನಿಂತು ರಿಪೇರಿಗೆ ಸಹಕರಿಸಿದರು.
ಬಳಿಕ ಆ್ಯಂಬುನ್ಸ್ನಲ್ಲಿದ್ದ ರೋಗಿಯ ಅರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಆ್ಯಂಬುಲೆನ್ಸ್ ಟೈಯರ್ ಬದಲಿಸಲು ನೆರವಾದ ಶಾಸಕ ಎಂ ಪಿ ರೇಣುಕಾಚಾರ್ಯಗೆ ರೋಗಿ ಕೃತಜ್ಞತೆ ಸಲ್ಲಿಸಿದರು. ಸಮಾಜಮುಖಿ ಕೆಲಸಕ್ಕೆ ಮುಂದಾದ ಶಾಸಕರ ನಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಪಂಚಮಸಾಲಿ ಸಮುದಾಯ ನಿರ್ಲಕ್ಷಿಸಿದರೆ ತೊಂದರೆ ಅನುಭವಿಸಬೇಕಿದೆ:ಬಸವಜಯ ಮೃತ್ಯುಂಜಯ ಶ್ರೀ ವಾರ್ನಿಂಗ್