ETV Bharat / city

ದಾವಣಗೆರೆ: ಕೋತಿ ಕಾಟಕ್ಕೆ ಬೇಸತ್ತ ಜನರು..ಮನೆಯಿಂದ ಹೊರಬರಲು ಹಿಂದೇಟು! - ದಾವಣಗೆರೆಯಲ್ಲಿ ಮಂಗನ ಸಮಸ್ಯೆ

ದಾವಣಗೆರೆ ತಾಲೂಕಿನ ತುಂಬಿಗೆರೆ ಗ್ರಾಮದಲ್ಲಿ ಕೋತಿ ಕಾಟ ಶುರುವಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ..

monkey problem in davanagere
ದಾವಣಗೆರೆಯ ತುಂಬಿಗೆರೆ ಗ್ರಾಮದಲ್ಲಿ ಕೋತಿ ಕಾಟ
author img

By

Published : Feb 8, 2022, 7:25 AM IST

ದಾವಣಗೆರೆ: ದಾವಣಗೆರೆ ತಾಲೂಕಿನ ತುಂಬಿಗೆರೆ ಗ್ರಾಮದಲ್ಲಿ ಜನರು ನಿರ್ಭೀತಿಯಿಂದ ಓಡಾಡುವಂತಿಲ್ಲ. ರೈತರು ಟ್ರಾಕ್ಟರ್​ನೊಂದಿಗೆ ಜಮೀನಿಗೆ ಹೋದ್ರೆ ಸಾಕು ಮಗನಿಂದ ದಾಳಿ ಖಚಿತ. ಇರೋದು ಒಂದೇ ಕೋತಿಯಾದ್ರೂ, ಇಡೀ ಗ್ರಾಮದಲ್ಲಿ ಭಯ ಹುಟ್ಟುವಂತೆ ಮಾಡಿದೆ. ಮಂಗನ ದಾಳಿ ಭಯದಿಂದ ಜನರು ಮನೆ ಬಿಟ್ಟು ಹೊರಬಾರದ ಪರಿಸ್ಥಿತಿ ನಿರ್ಮಾಣ ಆಗಿದೆ.

ಕಳೆದ ಮೂರು ತಿಂಗಳಿನಿಂದ ಈ ಗ್ರಾಮದಲ್ಲಿ ಕೋತಿ ಕಾಟ ಶುರುವಾಗಿದೆ. ಹೋಗಲಿ ಬಿಡಿ ಅಂತ ಗ್ರಾಮಸ್ಥರು ಸುಮ್ಮನಿದ್ದರೂ ಕೂಡ ಕೋತಿ ಚೇಷ್ಠೆ ಹೆಚ್ಚಾಗಿದೆ. ಪರಿಣಾಮ ಜನರು ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ‌.

ದಾವಣಗೆರೆಯ ತುಂಬಿಗೆರೆ ಗ್ರಾಮದಲ್ಲಿ ಕೋತಿ ಕಾಟ

ಈಗಾಗಲೇ ಹತ್ತಕ್ಕೂ ಹೆಚ್ಚು ಜನರ ಮೇಲೆ ಈ ಕೋತಿ ದಾಳಿ ಮಾಡಿದೆ. ಜಮೀನಿಗೆ ಹೋಗುವ ಟ್ರಾಕ್ಟರ್ ಸದ್ದು ಕಿವಿಗೆ ಬಿದ್ದರೆ ಸಾಕು ನೇರವಾಗಿ ಬಂದು ದಾಳಿ ಮಾಡುತ್ತದೆ. ಶಾಲೆಯ ಮಕ್ಕಳ ಮೇಲೆ ಹೆಚ್ಚು ದಾಳಿ ಮಾಡಿದ್ದು, ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಸಿಬ್ಬಂದಿ ಬೋನ್ ಇಟ್ಟು ಕೋತಿ ಸೆರೆಗೆ ಪ್ರಯತ್ನಿಸಿದ್ರೂ ಕೂಡ ಪ್ರಯತ್ನ ವಿಫಲ ಆಗಿದೆ.

ಕಳೆದ ಎರಡು ವರ್ಷದ ಹಿಂದೆ ಇದೇ ಗ್ರಾಮದಲ್ಲಿ ಕೋತಿ ಕಾಟ ಹೆಚ್ಚಾಗಿತ್ತು. ಮಂಗನ ದಾಳಿ ಭಯದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದ. ಆಗ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕೋತಿಯನ್ನು ಹಿಡಿದಿದ್ದರು. ಸಮಸ್ಯೆ ಸರಿಹೋಯಿತು ಎನ್ನುವಷ್ಟರಲ್ಲಿ ಮತ್ತೊಂದು ಕೋತಿ ತುಂಬಿಗೆರೆ ಗ್ರಾಮಸ್ಥರ ನೆಮ್ಮದಿಯನ್ನು ಕಸಿದುಕೊಂಡಿದೆ.

ಇದನ್ನೂ ಓದಿ: ಧರ್ಮವೊಂದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್-ದಾವಣಗೆರೆಯಲ್ಲಿ ಪ್ರತಿಭಟನೆ!

ಹೀಗೆ ಕೋತಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದನ್ನು ಗಮನಿಸಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಶಿವಮೊಗ್ಗ ಸೇರಿದಂತೆ ಬಹುತೇಕ ಕಡೆ ಇಂತಹ ಕೋತಿಗಳನ್ನು ಹಿಡಿಯುವ ಪರಿಣಿತರ ತಂಡಗಳಿವೆ. ಇಂತಹ ತಂಡಗಳನ್ನ ಕರೆತಂದು ಕೋತಿ ಹಿಡಿಯುವಂತೆ ಜನರು ವಿನಂತಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.