ETV Bharat / city

Congress ಗೂಂಡಾ ಪಾರ್ಟಿ ಅಲ್ವಾ? ಎಂಎಲ್​ಸಿ ರವಿಕುಮಾರ್ - ದಾವಣಗೆರೆಯಲ್ಲಿ ಎಂಎಲ್​ಸಿ ರವಿಕುಮಾರ್ ಹೇಳಿಕೆ

ನಲಪಾಡ್ ಘಟನೆ, ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ, ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಗೋಪಾಲ್ ಕೃಷ್ಣ ಸ್ಕೆಚ್ ಇವೆಲ್ಲ ಏನನ್ನು ಸೂಚಿಸುತ್ತವೆ. ಇದನ್ನು ಡಿಕೆಶಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ವಿಶ್ವನಾಥ್ ಅವ​ರನ್ನು ಫಿನಿಷ್ ಮಾಡಬೇಕು ಎನ್ನುತ್ತಾರೆ. ಅಂದ್ರೆ ಕಾಂಗ್ರೆಸ್ ಗೂಂಡಾ ಪಾರ್ಟಿ ಅಲ್ವಾ? ನಿಮ್ಮ ಪಕ್ಷಕ್ಕೆ ನಾಚಿಕೆ ಅನ್ನೋದು ಇಲ್ವಾ? ಎಂದು ರವಿಕುಮಾರ್ ಕಿಡಿಕಾರಿದರು.

MLC Ravikumar criticize Congress
ವಿಧಾನ ಪರಿಷತ್ ಸದಸ್ಯ ರವಿಕುಮಾರ್
author img

By

Published : Dec 2, 2021, 4:19 PM IST

ದಾವಣಗೆರೆ: ನಲಪಾಡ್ ಘಟನೆ, ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ, ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಗೋಪಾಲ್ ಕೃಷ್ಣ ಸ್ಕೆಚ್ ಇವೆಲ್ಲ ಏನನ್ನು ಸೂಚಿಸುತ್ತವೆ. ಇದನ್ನು ಡಿಕೆಶಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಂದರೆ, ಕಾಂಗ್ರೆಸ್ ಗೂಂಡಾ ಪಾರ್ಟಿ ಅಲ್ವಾ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ವಿಶ್ವನಾಥ್ ಅವ​ರನ್ನು ಫಿನಿಷ್ ಮಾಡಬೇಕು ಎನ್ನುತ್ತಾರೆ. ನಿಮ್ಮ ಪಕ್ಷಕ್ಕೆ ನಾಚಿಕೆ ಅನ್ನೋದು ಇಲ್ವಾ? ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ್

ಮಮತಾ ಬ್ಯಾನರ್ಜಿ ಅವರು ಯುಪಿಎ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅನ್ನು ಇನ್ನು ಮುಂದೆ ಹುಡುಕಬೇಕಾಗುತ್ತದೆ. 18 ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್​ ಪಕ್ಷ ಇದೀಗ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಪಂಜಾಬ್​ನಲ್ಲೂ ನೆಲಕಚ್ಚುತ್ತದೆ. ಕರ್ನಾಟಕದಲ್ಲಿ ನಾಲ್ಕೈದು ಲೀಡರ್​ಗಳಿಂದ ಮಾತ್ರ ಕಾಂಗ್ರೆಸ್ ಉಳಿದುಕೊಂಡಿದೆ. ದೀದಿ ನೀಡಿರುವ ಹೇಳಿಕೆ ಇಂದು ದೇಶದಲ್ಲಿ ಚರ್ಚೆಯಾಗುತ್ತಿದೆ ಎಂದರು.

ಇದನ್ನೂ ಓದಿ: 'ಕೈ'ಗೆ ಜಾರಿದ್ದ ತವರಿನಲ್ಲಿ ಪರಿಷತ್ ಮೂಲಕ ಮತ್ತೆ ಕಮಲ ಅರಳಿಸಲು ಮುಂದಾದ ಬಿಎಸ್​ವೈ

ಜೆಡಿಎಸ್ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲ, ಅದಕ್ಕೆ ನಾವು ಬೆಂಬಲ ಕೇಳಿದ್ದೇವೆ, ತಪ್ಪೇನಿದೆ. ನಮ್ಮ ಪ್ರಬಲ ಎದುರಾಳಿ ಕಾಂಗ್ರೆಸ್ ಪಕ್ಷ. ಆ ಕಾರಣಕ್ಕಾಗಿ ಜೆಡಿಎಸ್ ನಿಂದ ಬೆಂಬಲ ಕೇಳಿದ್ದೇವೆ. ಮೋದಿಯವರು ದೇವೇಗೌಡರು ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ದೇವೇಗೌಡರು ಹಿರಿಯರು, ಪ್ರಧಾನಿಗಳಾಗಿದ್ದವರು, ಅವರ ಆರೋಗ್ಯ ಯೋಗಕ್ಷೇಮದ ಬಗ್ಗೆ ಚರ್ಚೆ ನಡೆದಿದೆ ಅಷ್ಟೇ ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.