ದಾವಣಗೆರೆ: ಈದ್ಗಾ ಮೈದಾನ ನಿಮ್ಮಪ್ಪನ ಮನೆ ಆಸ್ತಿ ಅಲ್ಲ. ಭಾರತದ ಪ್ರತಿಯೊಂದು ಇಂಚಿಂಚು ಭೂಮಿ ಹಿಂದುಗಳದ್ದು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಶಾಸಕ ರೇಣುಕಚಾರ್ಯ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಈ ಭೂಮಿಯಲ್ಲಿ ವಿಘ್ನೇಶ್ವರನ ಪ್ರತಿಷ್ಠಾಪನೆ, ಭಾರತಾಂಬೆಯ ಧ್ವಜ ಹಾರಿಸಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂದರು.
ಬೆಂಗಳೂರು, ಹೊನ್ನಾಳಿ ಸೇರಿ ಅನೇಕ ಕಡೆ ಈ ರೀತಿ ಭೂಮಿಯನ್ನು ನುಂಗಿ ಹಾಕಿದ್ದಾರೆ. ಅವುಗಳನ್ನು ಬಿಡಿಸಿಕೊಳ್ಳುವ ಕೆಲಸ ನಾವು ಮಾಡುತ್ತೇವೆ ಎಂದು ಅವರು ಹೇಳಿದರು.
ಮಸೀದಿ, ದರ್ಗಾ, ಮದರಸಾ ಮೇಲೆ ಧ್ವಜ ಹಾರಿಸಲಿ: ಆರ್‌ಎಸ್‌ಎಸ್ ಕಚೇರಿ ಮೇಲೆ ಧ್ವಜ ಹಾರಿಸಲಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ನೀವು ಅಲ್ಪಸಂಖ್ಯಾತರ ಪರವಾಗಿದ್ದೇವೆ ಅಂತೀರಲ್ಲ ಮಸೀದಿ, ದರ್ಗಾ, ಮದರಸಾಗಳ ಮೇಲೆ ಧ್ವಜ ಹಾರಿಸಲು ಹೇಳಿ. ಭಾರತದಲ್ಲಿ ಹುಟ್ಟಿ ಇಸ್ಲಾಮಿಕ್ ದೇಶದ ಪರ ಜಿಂದಾಬಾದ್ ಎಂದು ಕೂಗಿದರೆ ನಾವು ಸಹಿಸುವುದಿಲ್ಲ ಎಂದರು.
ಇದನ್ನೂ ಓದಿ : ತ್ರಿವರ್ಣಧ್ವಜಕ್ಕೂ ಎತ್ತರದಲ್ಲಿ ಎಬಿವಿಪಿ ಧ್ವಜ ಹಾರಿಸಿದ ಆರೋಪ.. ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್ ದೂರು!