ದಾವಣಗೆರೆ: ಶಾಸಕ ಎಂ. ಪಿ. ರೇಣುಕಾಚಾರ್ಯರಿಂದ ಕೊರೊನಾ ರೋಗಿಗಳ ಸೇವೆ ಮುಂದುವರಿದಿದೆ. ಕ್ಷೇತ್ರದಲ್ಲಿ ಜನಪರ ಕಾಳಜಿ ಮೂಲಕ ಮನೆಮಾತಾಗಿರುವ ಹೊನ್ನಾಳಿ ಶಾಸಕ ಇಂದು ಬಾಣಸಿಗರಾಗಿ ಸೋಂಕಿತರಿಗೆ ಬಿಸಿ ಬಿಸಿಯಾದ ಹೋಳಿಗೆ ತಯಾರಿಸಿ ಗಮನ ಸೆಳೆದಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿ ಪತ್ನಿ ಸುಮಿತ್ರಾರೊಂದಿಗೆ ಶಾಸಕ ರೇಣುಕಾಚಾರ್ಯ ಬೆಳ್ಳಂಬೆಳಗ್ಗೆ ಹೋಳಿಗೆ ತಯಾರಿಸಿದರು. ಅರಬಗಟ್ಟೆ ಕೇರ್ ಸೆಂಟರ್ನಲ್ಲಿರುವ ಕೋವಿಡ್ ಸೋಂಕಿತರು ಹಾಗೂ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಆಸ್ಪತ್ರೆ, ಲಸಿಕಾ ಕೇಂದ್ರ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟು 5 ಸಾವಿರ ಮಂದಿಗೆ ಖುದ್ದು ಬಾಣಸಿಗರಾಗಿ ಹೋಳಿಗೆ ತಯಾರಿಸಿದರು.
ಮೇ 14ರ ಬಸವ ಜಯಂತಿಯಂದು ಕೂಡ ಸೋಂಕಿತರಿಗೆ ಒಂಟಿತನದ ಕೊರಗು ಬರಬಾರದು ಎಂಬ ಉದ್ದೇಶದಿಂದ ರೇಣುಕಾಚಾರ್ಯ ಅವರು ಹೋಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು.
ಇದನ್ನೂ ಓದಿ: ಬಾಲಕಿ ಮೇಲೆ ಯುವಕನ ದರ್ಪ: ದುಷ್ಕೃತ್ಯದ ವಿಡಿಯೋ ಜಾಲತಾಣಗಳಿಗೆ ಅಪ್ಲೋಡ್!