ದಾವಣಗೆರೆ: ಕೊರೊನಾ ವೇಳೆ ನಿಮಗೆ ಯಾವುದೇ ತೊಂದರೆ ಮಾಡಿಲ್ಲ, ಆದರೂ ಕೂಡ ನೀವು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದಿರಿ. ಮತ್ತೆ ಹೀಗೆ ಮಾಡಿದ್ರೆ ನಿಮ್ಮನ್ನು ನಿಗಮ ಕೈ ಬಿಡುತ್ತದೆ ಎಂದು ಹೊಳಲ್ಕೆರೆ ಶಾಸಕ, ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಚಂದ್ರಪ್ಪನವರು ಸಾರಿಗೆ ನೌಕರರಿಗೆ ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ನಡೆದ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಕೋಟ್ಯಾಂತರ ರೂ. ಸಂಬಳವನ್ನು ಸರ್ಕಾರ ನಿಮಗೆ ನೀಡಿದ್ದು, ಕೆಎಸ್ಆರ್ಟಿಸಿ ನೌಕರರಿಗೆ ತೊಂದರೆಯಾಗದಂತೆ ನೋಡಿಕೊಂಡಿದೆ. ಆದರೆ ಯಾರದ್ದೋ ಮಾತು ಕೇಳಿ ನೀವು ಬಂದ್ ನಡೆಸಿದ್ರಿ, ಮತ್ತೆ ಆ ರೀತಿ ಕೆಲಸ ಮಾಡಲು ಹೋಗಬೇಡಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಹಾಗೇನಾದರೂ ಮಾಡಿದ್ರೆ ಮುಂದಿನ ದಿನಗಳಲ್ಲಿ ನಿಗಮ ನಿಮ್ಮನ್ನು ಕೈ ಬಿಡುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.