ETV Bharat / city

ಕೊಟ್ಟ ಮಾತನ್ನು ಈಡೇರಿಸಿದ ಬಿ.ಎಸ್.ಯಡಿಯೂರಪ್ಪ: ಸಚಿವ ಆನಂದ್​ ಸಿಂಗ್ - Vijyanagara becomes 31st district of Karnataka

ಸರ್ಕಾರ ಭೌಗೋಳಿಕವಾಗಿ ಜಿಲ್ಲೆ ರಚಿಸಿದೆ. ಸಚಿವ ಸ್ಥಾನ ಬೇಡಿಕೆ ಇರಲಿಲ್ಲ. ವಿಜಯನಗರ ಜಿಲ್ಲೆ ಆಗಬೇಕೆಂಬ ಆಗ್ರಹ ಇತ್ತು. ಜಿಲ್ಲೆ ಜೊತೆ ಬ್ಯಾಂಕ್ ಅಧ್ಯಕ್ಷ ಸ್ಥಾನ ಬೋನಸ್ ಆಗಿದೆ ಎಂದು ಸಚಿವ ಆನಂದ್​ ಸಿಂಗ್​ ಸಂತಸ ವ್ಯಕ್ತಪಡಿಸಿದರು.

Anand Singh, Minister of Infrastructure Development, Hajj and Waqf
ಮೂಲಸೌಲಭ್ಯ ಅಭಿವೃದ್ಧಿ, ಹಜ್​​ ಮತ್ತು ವಕ್ಫ್​ ಸಚಿವ ಆನಂದ್​ ಸಿಂಗ್
author img

By

Published : Feb 9, 2021, 4:00 PM IST

ದಾವಣಗೆರೆ: ವಿಜಯನಗರ ಜಿಲ್ಲೆಯನ್ನು ರಚಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉಪಚುನಾವಣೆಯಲ್ಲಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆ ಎಂದು ಮೂಲಸೌಲಭ್ಯ ಅಭಿವೃದ್ಧಿ, ಹಜ್​​ ಮತ್ತು ವಕ್ಫ್​ ಸಚಿವ ಆನಂದ್​ ಸಿಂಗ್​ ಹೇಳಿದರು.

ಇದನ್ನೂ ಓದಿ...ವಿಜಯನಗರ ಜಿಲ್ಲೆ ರಚಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ : ಆನಂದ ಸಿಂಗ್​ ಮುನಿಸಿಗೆ ಮುಲಾಮು

ಹರಿಹರದ ರಾಜನಹಳ್ಳಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ರಚನೆ ಜೊತೆಗೆ ಯೂನಿಯನ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬೋನಸ್ ಸಿಕ್ಕಿದಂತಾಗಿದೆ. ಅನೇಕ ಯೋಜನೆಗಳಿಗೂ ಚಾಲನೆ ಸಿಕ್ಕಿದ್ದು, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳು ಎಂದರು.

ಮೂಲಸೌಲಭ್ಯ ಅಭಿವೃದ್ಧಿ, ಹಜ್​​ ಮತ್ತು ವಕ್ಫ್​ ಸಚಿವ ಆನಂದ್​ ಸಿಂಗ್

ಜಿಲ್ಲೆ ರಚನೆಗೆ ಜನರ ವಿರೋಧ ಇಲ್ಲ. ವೈಯಕ್ತಿಕ ವಿರೋಧ ಇದೆ ಅಷ್ಟೇ. ಇಪ್ಪತ್ತು ವರ್ಷದ ಹೋರಾಟ ಇದು. ನನ್ನ ಅವಧಿಯಲ್ಲಿ ವಿಜಯನಗರ ನೂತನ ಜಿಲ್ಲೆಯಾಗಿ ರಚನೆಗೊಂಡಿದ್ದು ಖುಷಿ ನೀಡಿದೆ. ಸರ್ಕಾರ ಭೌಗೋಳಿಕವಾಗಿ ಜಿಲ್ಲೆ ರಚಿಸಿದೆ. ಸಚಿವ ಸ್ಥಾನ ಬೇಡಿಕೆ ಇರಲಿಲ್ಲ. ಜಿಲ್ಲೆ ಆಗಬೇಕೆಂಬ ಆಗ್ರಹ ಇತ್ತು ಎಂದು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.