ETV Bharat / city

ದಾವಣಗೆರೆ ಪಾಲಿಕೆ ಮೇಯರ್ ವಿತರಿಸಿರುವ ಪಾಸ್‍ಗಳು ಅಸಿಂಧು: ಡಿಸಿ ಖಡಕ್​ ತೀರ್ಮಾನ - ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ

ಲಾಕ್‍ಡೌನ್ ಹಿನ್ನೆಲೆ ಪಾಲಿಕೆ ಮೇಯರ್ ವಿತರಿಸಿರುವ ಪಾಸ್‍ಗಳು ಅಸಿಂಧುವಾಗಿದ್ದು, ಈ ಪಾಸ್‍ಗಳನ್ನು ಬಳಕೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

meyar distribute pass is not valid davanagere dc said
ಮೇಯರ್ ವಿತರಿಸಿರುವ ಪಾಸ್‍ಗಳು ಅಸಿಂಧು: ಡಿಸಿ ಖಡಕ್ ತೀರ್ಮಾನ
author img

By

Published : Apr 8, 2020, 10:33 PM IST

ದಾವಣಗೆರೆ: ಲಾಕ್‍ಡೌನ್ ಹಿನ್ನೆಲೆ ಪಾಲಿಕೆ ಮೇಯರ್ ವಿತರಿಸಿರುವ ಪಾಸ್‍ಗಳು ಅಸಿಂಧುವಾಗಿದ್ದು, ಈ ಪಾಸ್‍ಗಳನ್ನು ಬಳಕೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೇಯರ್ ಪಾಸ್ ನೀಡಿರುವುದು ದುರ್ಬಳಕೆ ಆಗಿರುವ ಬಗ್ಗೆ ತಿಳಿದು ಬಂದ ಹಿನ್ನೆಲೆ ಡಿಸಿ ಮಹಾಂತೇಶ್ಅ ಮೇಯರ್ ಬಿ.ಜಿ.ಅಜಯ್‍ ಕುಮಾರ್​ ಅವರನ್ನು ಕಚೇರಿಗೆ ಕರೆಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ.‌ ಈ ವೇಳೆ ಮೇಯರ್ ಜಿಲ್ಲಾಡಳಿತಕ್ಕೆ ಪಾಸ್ ಕೇಳಿದ್ದೆವು. ಖಾಲಿಯಾಗಿದೆ ಎಂದು ತಿಳಿಸಿದ್ದರಿಂದ ತಾವೇ ಸ್ವತಃ ಪಾಸ್‍ಗಳನ್ನು ಮುದ್ರಿಸಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮೇಯರ್ ನೀಡಿರುವ ಪಾಸ್‍ಗಳನ್ನು ಸಾರ್ವಜನಿಕರು ಬಳಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಲಾಗುವುದು. ಪಾಸ್ ಪಡೆದವರು ಮರಳಿ ಮೇಯರ್ ಕಚೇರಿಗೆ ನೀಡಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.