ETV Bharat / city

'ಕ್ಷಮಿಸಿ...ನಾನು ಲಾಕ್ ಡೌನ್ ಉಲ್ಲಂಘಿಸಿದ್ದೇನೆ' - ಕೊರೊನಾ ವೈರಸ್​ ತಡೆಗೆ ಲಾಕ್​ಡೌನ್

ಯಾರೂ ಏನು ಮಾಡುವುದಿಲ್ಲ ಎಂಬ ಮನೋಭಾವನೆ ಬದಲಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ವಿನಾಕಾರಣ ಓಡಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ ಎಚ್ಚರಿಸಿದರು.

Corona virus lock-down
ಶಿಕ್ಷೆ
author img

By

Published : Apr 17, 2020, 7:36 PM IST

ದಾವಣಗೆರೆ: ಲಾಕ್‌ಡೌನ್ ಉಲ್ಲಂಘಿಸಿದ 120ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು 590 ವಾಹನಗಳನ್ನು ಜಫ್ತಿ ಮಾಡಿಕೊಂಡಿದ್ದಾರೆ. ವಶಕ್ಕೆ ಪಡೆದವರಿಗೆ 'ಮತ್ತೆ ಆದೇಶ ಉಲ್ಲಂಘಿಸುವುದಿಲ್ಲ' ಎಂಬ ನಾಮಫಲಕ ಹಿಡಿದುಕೊಳ್ಳುವ ಶಿಕ್ಷೆ ನೀಡಲಾಗಿದೆ.

ಮುಂಜಾನೆಯಿಂದಲೇ ದಾಳಿ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್​​​​ಪಿ ಹನುಮಂತರಾಯ ಅವರು ಲಾಕ್​ಡೌನ್​ ಆದೇಶ ಉಲ್ಲಂಘಿಸಿದವರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಅವರನ್ನು ನಗರದ ಡಿ.ಆರ್.ಮೈದಾನಕ್ಕೆ ಕರೆತರಲಾಯಿತು.

Corona virus lock-down
ನಾಮಫಲಕ ಹಿಡಿದು ನಿಂತುಕೊಳ್ಳುವ ಶಿಕ್ಷೆ

'ನಾನು ಕೊರೊನಾ ಹಿನ್ನೆಲೆಯಲ್ಲಿ ಲಾಕ್​​​​​​​​​​ಡೌನ್ ಉಲ್ಲಂಘಿಸಿ ತಪ್ಪು ಮಾಡಿದ್ದೇನೆ'. 'ಮತ್ತೆ ಲಾಕ್​​ಡೌನ್ ಉಲ್ಲಂಘಿಸುವುದಿಲ್ಲ ಎಂಬ ನಾಮಫಲಕ ಹಿಡಿದು ನಿಲ್ಲುವ ಶಿಕ್ಷೆ ನೀಡಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ್ ಮಾತನಾಡಿ, ಆದೇಶ ಉಲ್ಲಂಘಿಸಿದರೆ ಯಾರು ಏನು ಮಾಡುತ್ತಾರೆ ಎಂಬುದನ್ನು ಈಗ ತೋರಿಸಿದ್ದೇವೆ. ಆರತಿ ಮಾಡಿದ್ದಾಗಿದೆ. ಮನೆಯಿಂದ ಹೊರ ಬರೆಬೇಡಿ ಎಂದು ಕೈ ಮುಗಿದಿದ್ದು ಆಯ್ತು, ನಮಸ್ಕರಿಸಿದ್ದು ಆಯ್ತು. ಇನ್ನು ಮುಂದೆ ಹೀಗೆಲ್ಲಾ ಹೇಳುವುದಿಲ್ಲ ಎಂದು ಎಚ್ಚರಿಸಿದರು.

ಲಾಕ್​​ಡೌನ್​ ಉಲ್ಲಂಘಿಸಿದವರನ್ನು ವಶಕ್ಕೆ ಪಡೆದ ಪೊಲೀಸರು

ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಬೆಳಗ್ಗೆಯಿಂದಲೇ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದೇವೆ. ಏಪ್ರಿಲ್ 20ರವರೆಗೆ ಲಾಕ್​​​ಡೌನ್ ಆದೇಶವನ್ನು ಪಾಲನೆ ಮಾಡಲೇಬೇಕು ಎಂದು ಹೇಳಿದರು. ಜಿಲ್ಲಾಡಳಿತ, ಎಸ್ಪಿ, ಎಸಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.