ETV Bharat / city

ಪಂಚಮಸಾಲಿಗೆ ಸಿಗಬೇಕಿದ್ದ ಸಿಎಂ ಸ್ಥಾನವನ್ನ ಬಿಎಸ್​ವೈ ತಪ್ಪಿಸಿದ್ದಾರೆ : ಜಯಮೃತ್ಯುಂಜಯ ಶ್ರೀ - ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಕಾಯ್ದೆ

ನೂತನ ಸಿಎಂ ಬೊಮ್ಮಾಯಿ ನಮ್ಮವರು. ಅವರು ಮುಖ್ಯಮಂತ್ರಿ ಆಗಿದಕ್ಕೆ ಅಭಿಮಾನ ಇದೆ. ಮೀಸಲಾತಿ ಚಳವಳಿಯಲ್ಲಿ ಬೊಮ್ಮಾಯಿ ಅಂದು ಸಂಪೂರ್ಣ ಸಹಕಾರ ಕೊಟ್ಟಿದ್ದರು. ಯಡಿಯೂರಪ್ಪನವರು ಅಂದು ಮೀಸಲಾತಿ ನೀಡುವ ವಿಚಾರವಾಗಿ ವ್ಯಕ್ತಿಯಾಗಿ ಮಾತು ಕೊಟ್ಟಿಲ್ಲ, ಒಂದು ಸರ್ಕಾರದ ಪ್ರತಿನಿಧಿಯಾಗಿ ಮಾತು ಕೊಟ್ಟಿದ್ದರು. ಈಗ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ತೀರ್ಮಾನ ತೆಗೆದುಕೊಳ್ಳಬೇಕು..

mruthyunjaya-swamiji
ಜಯಮೃತ್ಯುಂಜಯ ಶ್ರೀ
author img

By

Published : Aug 10, 2021, 9:05 PM IST

ದಾವಣಗೆರೆ : ಮುಖ್ಯಮಂತ್ರಿ ಸ್ಥಾನ ಪಂಚಮಸಾಲಿ ಸಮಾಜಕ್ಕೆ ಸಿಗುತ್ತಿತ್ತು. ಅದನ್ನು ಯಡಿಯೂರಪ್ಪನವರು ತಪ್ಪಿಸಿದ್ದಾರೆ ಎಂದು ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳು ಮಾಜಿ ಸಿಎಂ ವಿರುದ್ಧ ಮತ್ತೆ ಗುಡುಗಿದರು.

ಯಡಿಯೂರಪ್ಪ ವಿರುದ್ಧ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ..

ನಗರದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಕೆಲವರ ಹೆಸರು ಸಿಎಂ ಲಿಸ್ಟ್​​ನಲ್ಲಿತ್ತು. ಕೊನೆಯವರೆಗೂ ಮೂರು ಜನರು ಸಿಎಂ ರೇಸ್​ನಲ್ಲಿದ್ದರು. ಆದರೆ, ಕೊನೆಗೆ ಬಿ ಎಸ್‌ ಬೊಮ್ಮಾಯಿಯವರನ್ನು ಅವರ ಹೈಕಮಾಂಡ್ ಸಿಎಂ ಎಂದು ಘೋಷಣೆ ಮಾಡಿತು. ಇದರಿಂದ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ತಪ್ಪಿಸಿದ್ರಾ ಯಡಿಯೂರಪ್ಪನವರು ಎಂಬ ನೋವು ಸಮಾಜಕ್ಕೆ ಕಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಅಕ್ಟೋಬರ್‌ ಒಂದರೊಳಗೆ ಮೀಸಲಾತಿ ಪ್ರಕಟಿಸಿ : ಈ ಹಿಂದೆ ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ಭರವಸೆ ನೀಡಿತ್ತು. ಅಕ್ಟೋಬರ್ ಒಂದರೊಳಗಾಗಿ ಆ ಪ್ರಕಾರ ಮೀಸಲಾತಿ ನೀಡಬೇಕು. ವಿಳಂಬವಾದ್ರೆ ಮತ್ತೆ ಪ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡಲಾಗುವುದು ಎಂದು ಸ್ವಾಮೀಜಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಕಾಯ್ದೆ ಮಂಡಿಸಿದೆ : ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ ಕಾಯ್ದೆಯನ್ನು ಮಂಡಿಸಿರುವುದನ್ನು ಸ್ವಾಗತಿಸುತ್ತೇನೆ. ಆಯಾ ರಾಜ್ಯಗಳಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಸಂಪೂರ್ಣವಾಗಿ ಅಧಿಕಾರ ಕೊಟ್ಟಿದೆ. ಮುಂದಿನ ತಿಂಗಳು ಸರ್ಕಾರ ನೀಡಿದ್ದ ಕಾಲಮಿತಿ ಮುಕ್ತಾಯಗೊಳ್ಳುತ್ತದೆ ಎಂದರು.

ಬೊಮ್ಮಾಯಿ ರೈಟ್ ಟೈಮ್​ಗೆ ರೈಟ್ ಸಿಎಂ : ನೂತನ ಸಿಎಂ ಬೊಮ್ಮಾಯಿ ನಮ್ಮವರು. ಅವರು ಮುಖ್ಯಮಂತ್ರಿ ಆಗಿದಕ್ಕೆ ಅಭಿಮಾನ ಇದೆ. ಮೀಸಲಾತಿ ಚಳವಳಿಯಲ್ಲಿ ಬೊಮ್ಮಾಯಿ ಅಂದು ಸಂಪೂರ್ಣ ಸಹಕಾರ ಕೊಟ್ಟಿದ್ದರು. ಯಡಿಯೂರಪ್ಪನವರು ಅಂದು ಮೀಸಲಾತಿ ನೀಡುವ ವಿಚಾರವಾಗಿ ವ್ಯಕ್ತಿಯಾಗಿ ಮಾತು ಕೊಟ್ಟಿಲ್ಲ, ಒಂದು ಸರ್ಕಾರದ ಪ್ರತಿನಿಧಿಯಾಗಿ ಮಾತು ಕೊಟ್ಟಿದ್ದರು. ಈಗ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಜೆ ಹೆಚ್ ಪಟೇಲ್ ಅವರ ಜನ್ಮದಿನದಂದು ಹೋರಾಟ ಆರಂಭ : ಮೀಸಲಾತಿ ನೀಡದಿದ್ದರೆ ಪಂಚಮಸಾಲಿ ಸಮಾಜ ಅಕ್ಟೋಬರ್ ಒಂದಕ್ಕೆ ಮಾಜಿ ಮುಖ್ಯಮಂತ್ರಿ ದಿ, ಜೆ ಹೆಚ್ ಪಟೇಲ್ ಅವರ ಜನ್ಮದಿನದಂದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ದುಂಡುಮೇಜಿನ ಸಭೆ : ಆಗಸ್ಟ್ 12ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ದುಂಡುಮೇಜಿನ ಸಭೆ ನಡೆಸಲಿದ್ದೇವೆ. ಈ ಸಭೆಯಲ್ಲಿ ರಾಷ್ಟ್ರಾಧ್ಯಕ್ಷರು ಸೇರಿದಂತೆ ರಾಜ್ಯದ ಮೂಲೆ‌ ಮೂಲೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಮುಂದಿನ‌ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.