ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಅತಿಥಿಯಾಗಿ ಆಗಮಿಸಿದ ಶಾಸಕ ರೇಣುಕಾಚಾರ್ಯರಿಗೆ ಗ್ರಾಮಸ್ಥರು ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.
ಅತಿಥಿಯಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೇಣುಕಾಚಾರ್ಯ ಅವರಿಗೆ ಕಡದಕಟ್ಟೆ ಗ್ರಾಮಸ್ಥರು ಹೆಗಲ ಮೇಲೆ ಕೂರಿಸಿಕೊಂಡು ಇಡೀ ಊರಿನಲ್ಲಿ ಮೆರವಣಿಗೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರು ಕೆಲ ಕಾಲ ಸ್ಪರ್ಧೆಯನ್ನು ನೋಡಿ ಕಣ್ತುಂಬಿಕೊಂಡರು.
ಇದೆ ವೇಳೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಶಿಕಾರಿಪುರ ಮೂಲದ ಬ್ರಾಂತೇಶ್ ಎಂಬ ಹೋರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತು. ಶಾಸಕ ರೇಣುಕಾಚಾರ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಯುವಕರಿಗೆ ಸಾಂತ್ವನ ಹೇಳಿದ್ರು. ಅಲ್ಲದೆ ನೆರವು ನೀಡಲು ಮುಂದಾದ್ರು ಕೂಡ ಯುವಕರು ಹಣವನ್ನು ಪಡೆಯಲಿಲ್ಲ.