ದಾವಣಗೆರೆ : ರಾಜ್ಯಾದ್ಯಂತ ಸಂಭ್ರಮ, ಸಡಗರದಿಂದ ಹೋಳಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಬೆಣ್ಣೆನಗರಿ ದಾವಣಗೆರೆಯ ಎಸ್ಎಸ್ ಲೇಔಟ್‌ನಲ್ಲಿ ಮಹಿಳೆಯರ ಗುಂಪು ಕೆಮಿಕಲ್ ಬಣ್ಣದ ಬದಲು ನೈಸರ್ಗಿಕ ಬಣ್ಣ ರೆಡಿ ಮಾಡಿ ಹೋಳಿ ಆಚರಣೆ ಮಾಡಿದ್ದಾರೆ.
ಮನೆಯಲ್ಲೇ ಸಿಗುವ ತರಕಾರಿ, ಸೊಪ್ಪು, ಹಣ್ಣು, ಮಜ್ಜಿಗೆಯಿಂದ ಬಣ್ಣವನ್ನು ತಯಾರಿಸಿ ಹೋಳಿ ಆಚರಣೆ ಮಾಡಿ, ಮಹಿಳೆಯರು ಸಂಭ್ರಮಿಸಿದ್ದಾರೆ. ಇದರಿಂದ ಚರ್ಮದ ತ್ವಚೆ ಕೂಡ ಕಾಂತಿಯುತವಾಗುತ್ತದೆ. ಅಲ್ಲದೆ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ.
ತರಕಾರಿ ಸೊಪ್ಪು, ಹಣ್ಣು ಸೇರಿದಂತೆ ನೈಸರ್ಗಿಕವಾಗಿ ಸಿಗುವ ಹಣ್ಣುಗಳಿಂದಲೂ ಬಣ್ಣ ಮಾಡಿಕೊಂಡಿದ್ದೇವೆ. ಇದರಿಂದ ಕೆಮಿಕಲ್ ರಹಿತ ಹೋಳಿ ಅಚರಣೆ ಮಾಡುತ್ತಿದ್ದೇವೆ ಎಂದು ಶಿಲ್ಪಾ ಹೇಳಿದರು.
ಯುವಕ-ಯುವತಿಯರು ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿಶೇಷವಾಗಿ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಅದ್ದೂರಿಯಾಗಿ ಡಿಜೆ ಸೌಂಡ್ಗೆ ಯುವಕ-ಯುವತಿಯರು ಹೆಜ್ಜೆ ಹಾಕಿ ಹೋಳಿ ಆಚರಣೆ ಮಾಡಿದರು.
ಯುವಕರಿಗೆ ಹಾಗೂ ಯುವತಿಯರಿಗೆ ಪ್ರತ್ಯೇಕವಾಗಿ ಗ್ಯಾಲರಿ ಮಾಡಿದ್ದು, ಡಿಜೆ ಸೌಂಡ್ ಅವರಿಗೆ ಇಷ್ಟವಾದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಅಲ್ಲದೆ ಯುವತಿಯರಿಗೆ ನೀರು ಬೀಳುವ ಶವರ್ ವ್ಯವಸ್ಥೆ ಮಾಡಲಾಗಿತ್ತು. ನೀರಿನ ಜೊತೆ ಡಿಜೆ ಸಾಂಗ್ಗೆ ಹುಚ್ಚೆದ್ದು ಕುಣಿದರು.