ETV Bharat / city

ಹರ್ಷ ಕೊಲೆ ಪ್ರಕರಣ: 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಶಾಸಕ ಎಂಪಿ ರೇಣುಕಾಚಾರ್ಯ - ಎಂಪಿ ರೇಣುಕಾಚಾರ್ಯ ಟ್ವೀಟ್

ಭಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಒಟ್ಟು 6 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

harsha-murder-case-renukacharya-compensation
ಹರ್ಷ ಕೊಲೆ ಪ್ರಕರಣ: 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಶಾಸಕ ಎಂಪಿ ರೇಣುಕಾಚಾರ್ಯ
author img

By

Published : Feb 22, 2022, 1:08 AM IST

Updated : Feb 22, 2022, 2:17 PM IST

ದಾವಣಗೆರೆ: ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ‌ಯಾದ ಬೆನ್ನಲ್ಲೇ ಇಡೀ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಮಗನನ್ನು ಕಳೆದುಕೊಂಡ ಹರ್ಷನ ಪೋಷಕರಿಗೆ ದಿಕ್ಕು ತೋಚದಂತಾಗಿದೆ. ಅದರೆ ಹರ್ಷನ ಕುಟುಂಬಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ 5 ಲಕ್ಷ ರೂಪಾಯಿ ವೈಯಕ್ತಿಕ ಪರಿಹಾರ ಹಾಗು ಹೊನ್ನಾಳಿ ಬಿಜೆಪಿ ವತಿಯಿಂದ 1 ಲಕ್ಷ ರೂ ಘೋಷಣೆ ಮಾಡಿದ್ದಾರೆ.

  • ಹರ್ಷನ ಸಾವನ್ನು ನಾವು ವಾಪಾಸ್ ತರಲು ಸಾಧ್ಯವಿಲ್ಲ. ಹರ್ಷ ಕುಟುಂಬಕ್ಕೆ ನಿನ್ನೆ ವೈಯಕ್ತಿಕವಾಗಿ ₹2ಲಕ್ಷ ಘೋಷಿಸಿದ್ದೆ

    ಈಗ ವಯಕ್ತಿಕವಾಗಿ ₹5,00,000/- ಮತ್ತು ಹೊನ್ನಾಳಿ ಬಿಜೆಪಿಯಿಂದ ₹1,00,000/- ಒಟ್ಟು
    ₹.6⃣,0⃣0⃣,0⃣0⃣0⃣/- ಪರಿಹಾರವನ್ನು ಗುರುವಾರ ಸಂಜೆ ಶಿವಮೊಗ್ಗದ ಹರ್ಷನ ಮನೆಗೆ ಹೋಗಿ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬುತ್ತೇನೆ

    — M P Renukacharya (@MPRBJP) February 22, 2022 " class="align-text-top noRightClick twitterSection" data=" ">

ಹರ್ಷ ಕುಟುಂಬದ ಜೊತೆ ನಾವೀದ್ದೇವೆ ಎಂದು ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮ ಫೇಸ್​​ಬುಕ್ ಖಾತೆಯಲ್ಲಿ ಹಣ ಘೋಷಣೆ ಮಾಡಿರುವ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ದಿನದಿಂದ ದುಷ್ಕರ್ಮಿಗಳು ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದು, ಹಿಂದೂ ಯುವಕರ ಪ್ರತಿ ರಕ್ತದ ಕಣಗಳನ್ನು ವ್ಯರ್ಥವಾಗಲು ಬಿಡೋದಿಲ್ಲ ಎಂದು ಶಾಸಕ ರೇಣುಕಾಚಾರ್ಯ ಶಪಥ ಮಾಡಿದ್ದಾರೆ.

ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ: ಶಿವಮೊಗ್ಗ ಎಸ್​ಪಿ

ಹಿಂದೂ ಯುವಕರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ದವಾಗಿರುತ್ತದೆ ಎಂದು ಪೋಸ್ಟ್ ಮಾಡಿದ ರೇಣುಕಾಚಾರ್ಯ ಹಣ ಘೋಷಿಸಿ, ನಾನು ಹರ್ಷನ ಕುಟುಂಬದ ಪರವಿದ್ದೇನೆ ಎಂಬ ಸಂದೇಶ ಸಾರಿದರು.

Last Updated : Feb 22, 2022, 2:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.