ETV Bharat / city

ಶಾಸಕ ರೇಣುಕಾಚಾರ್ಯಗೆ ಸಿಗಲಿಲ್ಲ ಸಚಿವ ಸ್ಥಾನ: ನಿಜವಾಯ್ತಾ ಹಳದಮ್ಮ ಹೇಳಿದ ಭವಿಷ್ಯ!? - ಹಳದಮ್ಮ ದೇವಿ ದೇವಸ್ಥಾನ ಸುದ್ದಿ

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಕರುಣಿಸು ಎಂದು ಅಭಿಮಾನಿಗಳು ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಯ ಅಪ್ಪಣೆ ಕೇಳಿದ್ದರು. ಈ ವೇಳೆ ದೇವತೆ ಎಡಗಡೆ ಪ್ರಸಾದ ಕರುಣಿಸಿದ್ದರು. ಇದೀಗ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪುವ ಮೂಲಕ ಭವಿಷ್ಯ ನಿಜವಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.

haladmamma not fulfilled mp renukacharya wish to become minister
ಹಳದಮ್ಮ ದೇವಾಲಯ
author img

By

Published : Aug 5, 2021, 6:16 PM IST

ದಾವಣಗೆರೆ: ಶಾಸಕ ಎಂ ಪಿ ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಮಾರಿಕೊಪ್ಪದ ಹಳದಮ್ಮ ಮೊದಲೇ ಹೇಳಿದ್ದಳಂತೆ. ಇದೀಗ ತಾಯಿ ಹಳದಮ್ಮನ ಹೇಳಿದ ಭವಿಷ್ಯ ನಿಜವಾಗಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

ಹಳದಮ್ಮ ದೇವಾಲಯ

ಕಳೆದ ಮೂರು ದಿನಗಳ ಹಿಂದೆ ರೇಣುಕಾಚಾರ್ಯ ಅಭಿಮಾನಿಗಳು ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಯ ಭವಿಷ್ಯ ಕೇಳಿದ್ದರು. ಸಚಿವ ಸ್ಥಾನ ಸಿಗುವುದಾದರೆ ಅಭಿಮಾನಿಗಳು ಬಲಗಡೆ ಪ್ರಸಾದ ಕರುಣಿಸುವಂತೆ ಅಪ್ಪಣೆ ಕೇಳಿದ್ದರು. ಸಚಿವ ಸ್ಥಾನ ಸಿಗುವುದಿಲ್ಲ ಎಂಬುದಾದರೆ ಎಡಗಡೆಯ ಪ್ರಸಾದ ಕೇಳಿದರು.

ಆದ್ರೆ ಈ ವೇಳೆ ಹಳದಮ್ಮ ದೇವಿ ಎಡಗಡೆ ಪ್ರಸಾದ ಕರುಣಿಸಿದ್ದಳಂತೆ. ಬುಧವಾರ ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಗದಿರುವುದು ಹಳದಮ್ಮನ ಭವಿಷ್ಯ ನಿಜವಾಗಿದೆ ಎನ್ನಲಾಗ್ತಿದೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಶಾಸಕ ರೇಣುಕಾಚಾರ್ಯ ಈ ದೇವಸ್ಥಾನಕ್ಕೆ ತೆರಳಿ ಸಚಿವ ಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ಶಾಸಕರು ಸಾಕಷ್ಟು ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಕರುಣಿಸು ಎಂದು ಅಭಿಮಾನಿಗಳು ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಯ ಅಪ್ಪಣೆ ಕೇಳಿದ್ದರು.

ಈ ವೇಳೆ ದೇವತೆ ಎಡಗಡೆ ಪ್ರಸಾದ ಕರುಣಿಸಿದ್ದಳು. ಇದೀಗ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪುವ ಮೂಲಕ ಭವಿಷ್ಯ ನಿಜವಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.