ETV Bharat / city

ವಿಜಯೇಂದ್ರ ವಸೂಲಿ ಮಾಡ್ಲಿ, ಎಲ್ಲಾ ಖಾತೆಗಳನ್ನು ಬೊಮ್ಮಾಯಿಗೆ ಕೊಡ್ಲಿ: ಬಿಎಸ್​ವೈ ವಿರುದ್ಧ ಯತ್ನಾಳ್​​ ಮತ್ತೆ ವಾಕ್ಬಾಣ

author img

By

Published : Jan 28, 2021, 7:32 PM IST

ಮಾಧುಸ್ವಾಮಿ ಕಾನೂನು ಪಂಡಿತರು. ಯಡಿಯೂರಪ್ಪ ಸರ್ಕಾರ ಬರಲು ಸದನದಲ್ಲಿ ಹೋರಾಟ ಮಾಡಿದ್ದಾರೆ. ಅವರನ್ನು ಬಿಟ್ಟು ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ ಕೊಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದರು‌.

give-all-mistrial-post-to-basavaraj-bommayi-basangouda-patil-yatnal-said
ಯತ್ನಾಳ್

ದಾವಣಗೆರೆ: ವಿಜಯೇಂದ್ರ ವಸೂಲಿ ಮಾಡುತ್ತಾ ಹೋಗಲಿ, ಎಲ್ಲಾ ಖಾತೆಗಳನ್ನು ಬಸವರಾಜ್ ಬೊಮ್ಮಾಯಿಗೆ ಕೊಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ವಸೂಲಿ ಮಾಡ್ಲಿ, ಎಲ್ಲಾ ಖಾತೆಗಳನ್ನ ಬೊಮ್ಮಾಯಿಗೆ ಕೊಡ್ಲಿ: ಯತ್ನಾಳ್​ ಕಿಡಿ

ಹರಿಹರದಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್​ಗೆ ನನ್ನನ್ನ ಕೈ ಬಿಟ್ಟರೆ ವೀರಶೈವ ಲಿಂಗಾಯತರು ದೂರ ಆಗ್ತಾರೆ ಎಂದು ಯಡಿಯೂರಪ್ಪ ಹೆದರಿಸಿದ್ದಾರೆ. ಶಾಸಕರು ಹೋದ್ರೆ ಅನುದಾನ ಇಲ್ಲಾ ಅಂತಾರೆ. ವೀರಶೈವ ಪ್ರಾಧಿಕಾರ ಮಾಡಿ ಹಣ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಖಜಾನೆಯಲ್ಲಿಯೇ ಹಣವಿಲ್ಲ ಎಂದರು.

ಓದಿ-ನಡುರಸ್ತೆಯಲ್ಲೇ ಯುವತಿಯ ಕೊಂದು ತೋಟದಲ್ಲಿ ನೇಣಿಗೆ ಶರಣಾದ ಯುವಕ

ಸಿಎಂ ಎಲ್ಲರಿಗೂ ಮೋಸ ಮಾಡಿದ್ದಾರೆ

ಯಡಿಯೂರಪ್ಪ ಸಿಎಂ ಆಗಿ ಜಾಸ್ತಿ ದಿನ ಮುಂದುವರೆಯಲ್ಲ. ಸಿಎಂ ಎಲ್ಲರಿಗೂ ಮೋಸ ಮಾಡಿದ್ದಾರೆ. ಅವರು ಸಿಎಂ ಆಗಿ ಮುಂದುವರೆಯಲು ಸಾದ್ಯವಿಲ್ಲ ಎಂದು ಬಿಎಸ್​ವೈ ವಿರುದ್ಧ ಮತ್ತೆ ಹರಿಹಾಯ್ದರು.

ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ

ಅಲ್ಲದೆ, ಬೊಮ್ಮಾಯಿಗೆ ಕಾನೂನು ಖಾತೆ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್​​, ಮಾಧುಸ್ವಾಮಿ ಕಾನೂನು ಪಂಡಿತರು. ಯಡಿಯೂರಪ್ಪ ಸರ್ಕಾರ ಬರಲು ಸದನದಲ್ಲಿ ಹೋರಾಟ ಮಾಡಿದ್ದಾರೆ. ಅವರನ್ನು ಬಿಟ್ಟು ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.