ETV Bharat / city

ಕಾಂಗ್ರೆಸ್‌ನವರು ಹೆಂಡ, ಹಣದ ಬಲದಿಂದ ಚುನಾವಣೆ ಗೆಲ್ಲುತ್ತಿದ್ದ ಆ ಕಾಲ ಬದಲಾಗಿದೆ: ಮಾಜಿ ಸಿಎಂ ಬಿಎಸ್‌ವೈ - MLC election in Karnataka

MLC election in Karnataka: ದೇಶದಲ್ಲಿ ಇನ್ನೂ 25 ವರ್ಷಗಳ ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಹೆಂಡ ಹಾಗೂ ಹಣದ ಬಲದಿಂದ ಚುನಾವಣೆ ಗೆಲ್ಲುವ ಕಾಲ ಒಂದಿತ್ತು. ಆ ಕಾಲ ಬದಲಾಗಿದೆ ಎಂದು ವಿಧಾನ ಪರಿಷತ್​ ಚುನಾವಣಾ ಪ್ರಚಾರದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ 'ಕೈ' ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Former CM Yediyurappa slams Congress in Davanagere
ಕಾಂಗ್ರೆಸ್‌ನವರು ಹೆಂಡಾ, ಹಣದ ಬಲದಿಂದ ಚುನಾವಣೆ ಗೆಲ್ಲುತ್ತಿದ್ದ ಆ ಕಾಲ ಬದಲಾಗಿದೆ: ಮಾಜಿ ಸಿಎಂ ಬಿಎಸ್‌ವೈ
author img

By

Published : Nov 24, 2021, 7:47 PM IST

Updated : Nov 24, 2021, 9:21 PM IST

ದಾವಣಗೆರೆ: ಕಾಂಗ್ರೆಸ್‌ನವರು ಹೆಂಡ ಹಾಗೂ ಹಣದ ಬಲದಿಂದ ಚುನಾವಣೆ ಗೆಲ್ಲುವ ಕಾಲ ಒಂದಿತ್ತು, ಆ ಕಾಲ ಬದಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್‌ನವರು ಹೆಂಡ, ಹಣದ ಬಲದಿಂದ ಚುನಾವಣೆ ಗೆಲ್ಲುತ್ತಿದ್ದ ಆ ಕಾಲ ಬದಲಾಗಿದೆ: ಮಾಜಿ ಸಿಎಂ ಬಿಎಸ್‌ವೈ

B.S.Yediyurappa: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದ ಪ್ರಚಾರ ಸಭೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಇನ್ನೂ 25 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿದೆ. ಈ ಉಸಿರು ನಿಲ್ಲಸಬೇಕೆಂದರೆ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು. ಜಾತಿಯ ವಿಷ ಬೀಜ ಬಿತ್ತಿದ್ದು ಕಾಂಗ್ರೆಸ್ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದ್ದಾರೆ.

ಹೆಣ್ಣುಮಕ್ಕಳು ಕಣ್ಣೀರು ಹಾಕುವ ಕಾಲ ಒಂದಿತ್ತು. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಆ ಕಣ್ಣೀರು ಒರೆಸಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಯಿತು. 20 ಲಕ್ಷ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಯೋಜನೆ ಪ್ರಯೋಜನ ಪಡೆದಿದ್ದಾರೆ ಎಂದರು‌.

'ಗಾಂಧಿಯವರು ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದಿದ್ದರು':
ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಆ ಪಕ್ಷದ ನಾಯಕರಿಗೆ ಅಂದು ಹೇಳಿದ್ರು. ಕಾಂಗ್ರೆಸ್ ನಾಯಕರು ಅಧಿಕಾರ ದುರಪಯೋಗ ಮಾಡಿಕೊಳ್ಳುವ ಭಯ ಇತ್ತು ಎಂದು ಗಾಂಧಿ ಹೇಳಿದ್ರು. ಆದರೆ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲಿಲ್ಲ. ಬದಲಿಗೆ ರಾಜ್ಯದ ಜನತೆ ಇದೀಗ ಕಾಂಗ್ರೆಸ್‌ ಅನ್ನು ಉಸಿರಾಡದಂತೆ ಮಾಡಿದ್ದಾರೆ ಎಂದು ಬಿಎಸ್​ವೈ ಟೀಕಿಸಿದರು.

'ಲಖನ್ ಜಾರಕಿಹೊಳಿ ಬಗ್ಗೆ ಸಿಎಂ ಬಳಿ ಮಾತನಾಡಿದ್ದೇನೆ'
ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಗೆ ಮಾತನಾಡಿ ಎಂದು ಹೇಳಿದ್ದೇನೆ. ನಾನು ಕೂಡ ಅವರ ಹತ್ತಿರ ಮಾತನಾಡುತ್ತೇನೆ ಎಂದರು.

ಪ್ರಧಾನಿ ನಿರ್ಧಾರಕ್ಕೆ ಬಿಎಸ್​ವೈ ಅಭಿನಂದನೆ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ವರೆಗೂ ಉಚಿತ ಪಡಿತರ ಮುಂದುವರೆಸಿದ್ದಾರೆ. ರಾಜ್ಯ, ದೇಶದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದ್ದ ಕಾಲದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

Last Updated : Nov 24, 2021, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.