ದಾವಣಗೆರೆ : ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು ಟಿಪ್ಪು ಹಾಗೂ ರಾಣಿ ಚನ್ನಮ್ಮನ ಮತ್ತು ರಾಯಣ್ಣನ ಕಾಲದಲ್ಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಸೋತಿದ್ದು ನಮ್ಮಲ್ಲಿರುವ ಕೆಲ ದೇಶದ್ರೋಹಿಗಳಿಂದ. ರಾಯಣ್ಣ ಸಣ್ಣ ಸೈನ್ಯವನ್ನು ಕಟ್ಟಿ ಗೆರಿಲ್ಲಾ ಯುದ್ಧ ಮಾಡಿದ್ರು. ಗೆರಿಲ್ಲಾ ಯುದ್ಧ ಅಂದ್ರೆ ನಿಮಗೆ ಗೊತ್ತಾ ಎಂದು ಜನರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು.
ಇನ್ನು, ಯಕ್ಕನಹಳ್ಳಿಯನ್ನು ಮಿನಿ ನಂದಘಡ ಎಂದು ಕರಿತಾರೇ ಅದು ತಪ್ಪು, ನಂದಘಡ ಸಂಗೊಳ್ಳಿ ರಾಯಣ್ಣನನ್ನು ನೇಣು ಹಾಕಿದ ಸ್ಥಳ. ಹುಟ್ಟಿದ ಜಾಗ ಸಂಗೊಳ್ಳಿ ಗ್ರಾಮ. ಹಾಗಾದ್ರೆ, ಮಿನಿ ನಂದಘಢ ರಾಯಣ್ಣನನ್ನು ನೇಣು ಹಾಕಿದ ಜಾಗ ಏನಯ್ಯಾ ಎಂದು ಗ್ರಾಮಸ್ಥರಿಗೆ ಸವಿಸ್ತಾರವಾಗಿ ವಿವರಿಸಿದರು.
ಚೆನ್ನಮ್ಮನ ಹೆಸರಲ್ಲಾದರೂ ಅನುದಾನ ಬಿಡುಗಡೆ ಮಾಡಿ : ಸಂಗೊಳ್ಳಿ ಹಾಗೂ ನಂದಘಡ ಅಭಿವೃದ್ಧಿಗೆ ₹270 ಕೋಟಿ ಬಿಡುಗಡೆ ಮಾಡಿದ್ದೆ. ಈಗ ಏನಾದ್ರೂ ಅನುದಾನ ಕೊಡ್ತಾ ಇದಾರೇನಯ್ಯ.. ರೇಣುಕಾಚಾರ್ಯ ನೀನು ಯಡಿಯೂರಪ್ಪನ ಜೊತೆ ಚೆನ್ನಾಗಿದೀಯಾ, ನೀನು ಹೇಳಿ ಬೇಗ ಅನುದಾನ ಕೊಡಿಸು. ರಾಯಣ್ಣ ಬಿಡಿ, ಚೆನ್ನಮ್ಮನ ಹೆಸರಿನಲ್ಲಾದರೂ ಅನುದಾನ ಬಿಡುಗಡೆ ಮಾಡಿ ಎಂದು ರೇಣುಕಾಚಾರ್ಯಗೆ ಕುಟುಕಿದರು.