ದಾವಣಗೆರೆ: ಮನೆಯೊಂದರ ಬಾಗಿಲಿಗೆ ಚಿಲಕ ಹಾಕಿ ಮಧ್ಯರಾತ್ರಿ ಇಬ್ಬರು ಖದೀಮರು ಫೈಟರ್ ಕೋಳಿಗಳನ್ನು ಕದ್ದು ಪರಾರಿಯಾಗಿರುವ ಘಟನೆ ಹೊಸಕುಂದವಾಡದಲ್ಲಿ ನಡೆದಿದೆ. 6 ಫೈಟರ್ ಕೋಳಿಗಳನ್ನು ಯುವಕರಿಬ್ಬರು ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಸವರಾಜ್ ಎನ್ನುವವರು ಮನೆಯ ಹೊರಗೆ ಕಪಾಟಿನಲ್ಲಿ ಫೈಟರ್ ಕೋಳಿಗಳನ್ನು ಇರಿಸಿ ಸಾಕುತ್ತಿದ್ದರು. ಬುಧವಾರ ರಾತ್ರಿ 10-45ಕ್ಕೆ 6 ಕೋಳಿಗಳನ್ನು ಖದೀಮರು ಎಗರಿಸಿದ್ದಾರೆ. ಒಂದು ಕೋಳಿ ಮರಿ 1,500 ರೂಪಾಯಿಂದ 2 ಸಾವಿರ ರೂಪಾಯಿ ಬೆಲೆ ಬಾಳುತ್ತಿದ್ದರಿಂದ ಕಳ್ಳರಿಬ್ಬರು ಈ ಕೋಳಿಗಳನ್ನು ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಮೈ ಮರೆಯುವ ಕೆಲಸ ಆಗಬಾರದು, ಜನರ ಕಷ್ಟಕ್ಕೆ ಸ್ಪಂದಿಸಿ: ಬಂಡೆಪ್ಪ ಕಾಶೆಂಪೂರ್
ಬಸವರಾಜ್ ಅಧಿಕ ಬೆಲೆ ಬಾಳುವ ಕೋಳಿಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳಿಯುತ್ತಿದ್ದಾರೆ. 6 ಫೈಟರ್ ಕೋಳಿಗಳನ್ನು ಕಳ್ಳತನ ಮಾಡಿರುವ ಖದೀಮರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.