ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ತಮಗೆ ಕಂಕಣ ಕಟ್ಟಲಿಲ್ಲ ಎಂದು ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಪುತ್ರನ ಸಮ್ಮುಖದಲ್ಲೇ ರೈತರಿಂದ ಅಸಮಾಧಾನ... ಕಾರಣ? - ಡಿಸಿ ಮಹಾಂತೇಶ್ ಬೀಳಗಿ ರೈತರನ್ನು ಸಮಾಧಾನ ಪಡಿಸಲು ಯತ್ನಿಸಿ
ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ರೈತರಿಗೆ ಕಂಕಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇದ್ದ ಕಾರ್ಯಕ್ರಮದಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಪುತ್ರನ ಸಮ್ಮುಖದಲ್ಲೇ ರೈತರು ಕೆಂಡಮಂಡಲ ಕಾರಣವೇನು ಗೊತ್ತಾ...?
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ತಮಗೆ ಕಂಕಣ ಕಟ್ಟಲಿಲ್ಲ ಎಂದು ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಡಿಸಿ ಮಹಾಂತೇಶ್ ಬೀಳಗಿ ಅವರು ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಈ ವೇಳೆ ಬಲ್ಲೂರು ರವಿಕುಮಾರ್ ಹಾಗೂ ರೈತರು ರಾಜಕಾರಣಿಗಳು ಮಾತ್ರ ಬೇಕಿದ್ದರೆ ನಮ್ಮನ್ಯಾಕೆ ಆಹ್ವಾನಿಸಿದ್ದೀರಿ ಎಂದು ಪ್ರಶ್ನಿಸಿದರು. ಬಳಿಕ ಪೂಜೆ ವೇಳೆ ಈ ರೀತಿ ಮಾತನಾಡಬೇಡಿ, ಪೂಜೆಗೆ ಬನ್ನಿ ಎಂದು ಡಿಸಿ ಹಾಗೂ ಶ್ರೀಗಳು ಮನವಿ ಮಾಡಿಕೊಂಡ ಬಳಿಕ ರೈತರೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡರು.