ETV Bharat / city

ಅಪ್ಪು ಪ್ರೇರಣೆ: ದಾವಣಗೆರೆಯ ಜಿಲ್ಲೆಯ ಈ ಗ್ರಾಮದಲ್ಲಿ 60ಕ್ಕೂ ಹೆಚ್ಚು ಜನರಿಂದ ನೇತ್ರದಾನ - ನೇತ್ರ ದಾನ

ಲಕ್ಷಾಂತರ ಅಭಿಮಾನಿಗಳನ್ನು ಅಗಲಿರುವ ನಟ ಪುನೀತ್​​ಗೆ ಅಭಿಮಾನಿಗಳು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ಮಾದರಿ ಹಾದಿ ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ. ಈ ಸಾಕ್ಷಿ ಎಂಬಂತೆ ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದ 60ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ.

davanagere
ದಾವಣಗೆರೆಯ ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಜನರಿಂದ 'ನೇತ್ರ' ದಾನ
author img

By

Published : Nov 7, 2021, 1:39 PM IST

ದಾವಣಗೆರೆ: ನಟ ಸಾರ್ವಭೌಮ ಡಾ.ರಾಜ್​​ಕುಮಾರ್ ವಿಧಿವಶರಾದಾಗ ನೇತ್ರ ದಾನ ಮಾಡಿದಂತೆ, ನಟ ಪುನೀತ್ ರಾಜ್‍ಕುಮಾರ್ ಕೂಡ ನೇತ್ರ ದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ. ಇದರಿಂದ ಪ್ರೇರೇಪಿತರಾದ ಜಿಲ್ಲೆಯ ಬಂಜಾರ ಸಮುದಾಯದ 60ಕ್ಕೂ ಅಧಿಕ ಜನರು ಕಣ್ಣು ದಾನ ಮಾಡಲು ಮುಂದಾಗಿದ್ದಾರೆ.

ದಾವಣಗೆರೆಯ ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಜನರಿಂದ 'ನೇತ್ರ' ದಾನ

ಹೌದು, ಲಕ್ಷಾಂತರ ಅಭಿಮಾನಿಗಳನ್ನು ಅಗಲಿರುವ ನಟ ಪುನೀತ್ ರಾಜ್​ಕುಮಾರ್​​ ಅವರಿಗೆ ಅಭಿಮಾನಿಗಳು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಪವರ್ ಸ್ಟಾರ್ ನಡೆದ ಮಾದರಿ ಹಾದಿಯಲ್ಲಿ ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದ ಗ್ರಾಮದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಕಣ್ಣು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಪುನೀತ್ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದ ಚಟ್ಟೋಬನಹಳ್ಳಿ ಗ್ರಾಮಸ್ಥರು ಒಂದು ವಾರ ಶೋಕದಲ್ಲಿ ಮುಳುಗಿದ್ದರು. ನಟ ಪುನೀತ್ ನೇತ್ರದಾನ ಮಾಡಿದ್ದರಿಂದ ಅವರ ಅಭಿಮಾನಿಗಳು ಕೂಡ ಈ ಆದರ್ಶವನ್ನು ಮೈಗೂಡಿಸಿಕೊಂಡಿದ್ದು, 60ಕ್ಕೂ ಅಧಿಕ ಮಂದಿ ದಾವಣಗೆರೆಯ ಜೆಜೆಎಮ್ ಮೆಡಿಕಲ್ ಕಾಲೇಜಿನ ಐ ಬ್ಯಾಂಕ್​​ಗೆ ನೇತ್ರದಾನ ಮಾಡುವ ವಾಗ್ದಾನದಿಂದ ಪುನೀತ್​​ಗೆ ನಮನ ಸಲ್ಲಿಸಿದ್ದಾರೆ.

davanagereನೇತ್ರ ದಾನ ಘೋಷಣಾ ಪತ್ರ
ನೇತ್ರದಾನ ಘೋಷಣಾ ಪತ್ರ

ನಟ ಪುನೀತ್ ಅನೇಕ ಜನರಿಗೆ ಸಹಾಯ ಮಾಡಿದ್ದಲ್ಲದೇ, ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಅದೇ ದಾರಿಯಲ್ಲಿಯೇ ಅವರ ಅಭಿಮಾನಿಗಳು ಸಾಗುತ್ತಿದ್ದಾರೆ. ಚಟ್ಟೋಬನಹಳ್ಳಿ ತಾಂಡದ ಜನರ ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ.

ಇದನ್ನೂ ಓದಿ: ಅಗಲಿದ ಮಡದಿ ಪತಿಯ ಮನದಲ್ಲಿ ಜೀವಂತ.. ಮನೆಯಲ್ಲೇ ಪತ್ನಿಯ ಮೂರ್ತಿ ಪ್ರತಿಷ್ಠಾಪಿಸಿದ ಗಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.