ದಾವಣಗೆರೆ : ಮೆಡಿಕಲ್ ಓದುತ್ತೀಯಾ ನಿನಗೆ ಮಾಸ್ಕ್ ಮಹತ್ವ ಗೊತ್ತಾ ಎಂದು ಮಾಸ್ಕ್ ಹಾಕದೆ ಹೊರ ಬಂದ ಮೆಡಿಕಲ್ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತರಾಟೆ ತೆಗೆದುಕೊಂಡರು.
ಓದಿ: ಮತ್ತೆ ಲಾಕ್ಡೌನ್ ಆಗುತ್ತೆ ಎಂಬ ಆತಂಕ ಬೇಡ: ಸಚಿವ ಶೆಟ್ಟರ್
ದಾವಣಗೆರೆ ಬಾಯ್ಸ್ ಹಾಸ್ಟೆಲ್ ರೋಡ್‌ನಲ್ಲಿ ಮೌನೇಶ್ ಎಂಬ ಬಿಎಎಮ್ಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ಡಿಸಿ ಕ್ಲಾಸ್ ತೆಗೆದುಕೊಂಡರು. ಇಂದು ಹಮ್ಮಿಕೊಂಡಿದ್ದ ಮಾಸ್ಕ್ ಅಭಿಯಾನ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸುತ್ತಿದ್ದ ವೇಳೆ, ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗೆ ಮೆಡಿಕಲ್ ಓದುತ್ತಿಯಾ ನಿನಗೆ ಮಾಸ್ಕ್ ಮಹತ್ವ ಗೊತ್ತಾ ಎಂದು ಪ್ರಶ್ನೆ ಮಾಡಿದರು.
ಮಾಸ್ಕ್ ಇಲ್ಲದೆ ಓಡಾಡಬಾರದು ಅಂತನಾದ್ರೂ ಗೊತ್ತಾ ನಿಂಗೆ, ಏಯ್ ಹುಚ್ಚಾ.. ಹಳೇ ಹುಚ್ಚಾ.. ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತರಾಟೆಗೆ ತೆಗೆದುಕೊಂಡರು. ಚಿಗಟೇರಿ ಆಸ್ಪತ್ರೆಯಲ್ಲಿ ಜಾಗವಿಲ್ಲ, ಕೊರೊನಾ ಬಂದರೆ ಎಲ್ಲಿಗೆ ಹೋಗ್ತೀಯಾ ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಮಾಸ್ಕ್ ಅರಿವು ಮೂಡಿಸಿದರು.