ದಾವಣಗೆರೆ : ಹೊಸ ವರ್ಷಾಚರಣೆಗೆ ದಾವಣಗೆರೆ ಮಂದಿ ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಕೇಕ್ಗಳನ್ನು ಕೂಡ ತಯಾರಿಸಲಾಗಿದೆ.
ಪ್ರತಿ ವರ್ಷ ಒಂದೂವರೆ ಕೋಟಿಯಷ್ಟು ಕೇಕ್ ವ್ಯವಹಾರ ಆಗುತ್ತಿತ್ತು. ಆದ್ರೆ, ಈ ಬಾರಿ ಸರ್ಕಾರ ಸಾಕಷ್ಟು ನಿರ್ಬಂಧ ಹೇರಿದ್ದರಿಂದ ಕೇಕ್ ತಯಾರಕರು ಸ್ವಲ್ಪ ಪ್ರಮಾಣದಲ್ಲಿ ಅಂದರೆ ಕೇವಲ 300ಕ್ಕೂ ಹೆಚ್ಚು ತರಹೇವಾರಿ ಕೇಕ್ಗಳನ್ನು ತಯಾರಿಸಿಕೊಂಡು ಗ್ರಾಹಕರ ಆಗಮನಕ್ಕೆ ಕಾದು ಕುಳಿತ್ತಿದ್ದಾರೆ.
ಚಾಕೋಲೇಟ್ ಕೇಕ್, ವೆನಿಲಾ ಕೇಕ್, ಗಿಟಾರ್ ಮಾದರಿಯ ಕೇಕ್, ಬೇಬಿ ಡಾಲ್ ಮಾದರಿಯಾ ಕೇಕ್, ಬಸ್, ಲಾರಿ, ಬ್ಯಾಗ್, ಕೋಲ್ಡ್ ಕೇಕ್, ಸಿಂಹ, ಹುಲಿ ಹಾಗೂ ಕ್ರಿಕೆಟ್ ಕ್ರೀಡಾಂಗಣದ ಮಾದರಿ ಕೇಕ್ ಸೇರಿದಂತೆ ತರಹೇವಾರಿಯ ಕೇಕ್ಗಳನ್ನು ತಯಾರಿಸಲಾಗಿದೆ.
ಪ್ರತಿ ವರ್ಷ ಆಹಾರ್ 2000 ಕೇಕ್ ಪಾಯಿಂಟ್ನಲ್ಲಿ ವಿಶಿಷ್ಟವಾಗಿ ಕೇಕ್ ತಯಾರಿಸುತ್ತಿದ್ದರು. ಆದ್ರೆ, ಕೊರೊನಾ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದ್ದರಿಂದ ಸರ್ಕಾರ ಸಾಕಷ್ಟು ನಿಯಮಗಳನ್ನು ಹೇರಿದ್ದರಿಂದ ಕೇಕ್ ತಯಾರಕರು ಕಡಿಮೆ ಪ್ರಮಾಣದಲ್ಲಿ ಕೇಕ್ಗಳನ್ನು ತಯಾರಿಸಿದ್ದಾರೆ ಎಂದು ತಿಳಿದು ಬಂದಿದೆ.