ETV Bharat / city

ದಾವಣಗೆರೆ ನವಜಾತ ಶಿಶು ನಾಪತ್ತೆ ಪ್ರಕರಣ: ಮಗು ಹುಡುಕಿ ಕೊಟ್ಟವರಿಗೆ ₹25 ಸಾವಿರ ಬಹುಮಾನ

ಕಳೆದ ಹೋದ ನವಜಾತ ಶಿಶುವಿಗಾಗಿ ಪೋಷಕರು ಪರಿತಪಿಸುತ್ತಿದ್ದಾರೆ. ಇತ್ತ ಮಗು ಹುಡುಕಿ ಕೊಟ್ಟವರಿಗೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸ್​​ ಇಲಾಖೆ ಘೋಷಿಸಿದೆ.

Davanagere newborn kidnap case
ದಾವಣಗೆರೆ ನವಜಾತ ಶಿಶು ನಾಪತ್ತೆ ಪ್ರಕರಣ: ಪೋಷಕರಿಂದ ಅಹೋರಾತ್ರಿ ಧರಣಿ
author img

By

Published : Apr 2, 2022, 11:09 AM IST

ದಾವಣಗೆರೆ: ಅವರು ಹುಟ್ಟು ಬಡವರು, ಮಕ್ಕಳಾಗದೆ ಆಸ್ಪತ್ರೆಗೆ ಅಲೆದಿದ್ದ ಆ ದಂಪತಿಗೆ, ದೇವರು 9 ವರ್ಷಗಳ ಬಳಿಕ ಮಕ್ಕಳ ಭಾಗ್ಯ ಕರುಣಿಸಿದ್ದ. ಆದರೆ ನವಜಾತ ಶಿಶು ಜನಿಸಿದ ಎರಡು ಗಂಟೆಯಲ್ಲೇ ಎರಡೇ ಗಂಟೆಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ನಾಪತ್ತೆಯಾಗಿತ್ತು. ಮಗು ನಾಪತ್ತೆಯಾಗಿ 17 ದಿನಗಳು ಕಳೆದರೂ ಮಗುವಿನ ಸುಳಿವಿಲ್ಲ. ಇದೀಗ ಪೊಲೀಸ್ ಇಲಾಖೆ ಮಗು ಪತ್ತೆಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಿಸಿದೆ.

ಕಳೆದ ಹೋದ ನವಜಾತ ಶಿಶುವಿಗಾಗಿ ಪರಿತಪಿಸುತ್ತಿರುವ ಪೋಷಕರು...

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿ ಇಸ್ಮಾಯಿಲ್ ಜಬೀವುಲ್ಲಾ ಪತ್ನಿ ಉಮೇಸಲ್ಮಾ ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಕ್ಕಳ ಮತ್ತು ಮಹಿಳೆಯರ ಆಸ್ಪತ್ರೆಯಲ್ಲಿ ಗಂಡು ಮಗು ಜನ್ನ ನೀಡಿದ್ದರು. ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿತ್ತು.

ಇದನ್ನೂ ಓದಿ: ದಾವಣಗೆರೆ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲೇ ಗಂಡು ಶಿಶು ನಾಪತ್ತೆ

ಮಾ. 16ರಂದು ಮಗುವನ್ನು ಬೇರೆ ಮಹಿಳೆ ಕದ್ದೊಯ್ಯುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಘಟನೆ ಜರುಗಿ 17 ದಿನ ಉರುಳಿದರು ಪೊಲೀಸ್​​ ಇಲಾಖೆಗೆ ಮಗು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಮಗು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಪೋಷಕರು ಹಾಗೂ ಕುಟುಂಬ ವರ್ಗದವರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಗಂಡು ಶಿಶು ನಾಪತ್ತೆ ಪ್ರಕರಣ : ಆಸ್ಪತ್ರೆಯ ಅಧೀಕ್ಷಕರ ಮಾಹಿತಿ ಹೀಗಿದೆ..

ಮಗು ಸಿಗುವ ತನಕ ಅಹೋರಾತ್ರಿ ಧರಣಿ ಕೈಬಿಡುವುದಿಲ್ಲ ಎಂದು ಮಗುವಿನ ಕುಟುಂಸ್ಥರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಆಸ್ಪತ್ರೆ ಮುಂಭಾಗ ಅಡುಗೆ ಮಾಡಿ ಊಟ ಮಾಡುತ್ತಾ ಧರಣಿ ನಡೆಸುತ್ತಿದ್ದಾರೆ. ಇನ್ನು ಮಗುವಿಗಾಗಿ ಪರಿತಪಿಸುತ್ತಿರುವ ತಾಯಿ ಉಮೇಸಲ್ಮಾ ಅವರಿಗೆ ಮಗು ಐಸಿಯುನಲ್ಲಿದೆ ಎಂದು ಸುಳ್ಳು ಹೇಳಿ ಸಾಂತ್ವನ ಹೇಳಲಾಗುತ್ತಿದೆ. ಇತ್ತ ತಂದೆ ಇಸ್ಮಾಯಿಲ್ ಜಬೀವುಲ್ಲಾ ಮಗುವಿಗೆ ದಿನ ನಿತ್ಯ ಬೀದಿ ಬೀದಿ ತಿರುಗಿ ಹುಡುಕುತ್ತಿದ್ದಾರೆ.

ಇದನ್ನೂ ಓದಿ: 14 ದಿನ ಕಳೆದರೂ ಪತ್ತೆಯಾಗದ ನವಜಾತ ಶಿಶು: ಕೃತ್ಯ ಎಸಗಿದ ಮಹಿಳೆಯ ವಿಡಿಯೋ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.