ದಾವಣಗೆರೆ: ಸಾರ್ವಜನಿಕ ವ್ಯಾಯಾಮ ಶಾಲೆಗೆ ದಾವಣಗೆರೆ ಉತ್ತರ ಮತ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಪುತ್ರಿ ಹಾಗೂ ಮೊಮ್ಮಗ ಬೀಗ ಹಾಕಿರುವುದನ್ನು ಖಂಡಿಸಿ ಜೆಡಿಎಸ್ ಯುವ ಮುಖಂಡ ಶ್ರೀಧರ್ ಪಾಟೀಲ್ ಪ್ರತಿಭಟನೆ ನಡೆಸಿದರು.
ದಾವಣಗೆರೆ ನಗರದ ಆಂಜನೇಯ ಬಡಾವಣೆಯ 13 ಕ್ರಾಸ್ಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಜಿಮ್ ಆರಂಭಿಸಿತ್ತು. ಸ್ಥಳೀಯರು ಜಿಮ್ನ ಸದುಪಯೋಗ ಪಡೆದುಕೊಳ್ಳುತ್ತಿದ್ದರು. ಆದ್ರೆ ಈ ಜಿಮ್ಗೆ ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ ಹಾಗೂ ಮೊಮ್ಮಗ ಬೀಗ ಹಾಕಿ ಸಾರ್ವಜನಿಕರು ಬಾರದಂತೆ ನಿರ್ಬಂಧ ಹಾಕಿದ್ದಾರೆ.
ಈ ಬಗ್ಗೆ ಕೇಳಿದರೆ, ಜಿಮ್ ಟ್ರೈನರ್ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಅದಕ್ಕಾಗಿ ಜಿಮ್ ಬಂದ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರಂತೆ. ಇದನ್ನು ಹೊರತುಪಡಿಸಿ, ಸ್ಥಳೀಯರು ಉಚಿತವಾಗಿ ವ್ಯಾಯಾಮ ಅಭ್ಯಾಸ ಮಾಡುತ್ತಿದ್ದರು. ಅದ್ರೆ ಶಾಸಕರ ಪುತ್ರಿ ವ್ಯಾಯಾಮ ಅಭ್ಯಾಸಕ್ಕೆ ಬರುವಂತವರು ಹಣ ನೀಡಬೇಕೆಂದು ನಿಯಮ ಜಾರಿಗೆ ತಂದಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದರು.