ETV Bharat / city

ಗ್ರಾಮೀಣ ಭಾಗದಲ್ಲೂ ಕೊರೊನಾ ರಣಕೇಕೆ: 15 ದಿನದಲ್ಲಿ 22 ಜನ ಸಾವು! - Davangere latest News

ಹರಿಹರ ತಾಲೂಕಿನ ಕಡರನಾಯಕನಹಳ್ಳಿ ಹಾಗೂ ಮುದಹದಡಿ ಗ್ರಾಮಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಕಡರನಾಯಕನ ಹಳ್ಳಿಯಲ್ಲಿ 15 ದಿನದಲ್ಲಿ 22 ಜನ ಸಾವನ್ನಪ್ಪಿದ್ರೇ ಇತ್ತ ಇದೇ ಹರಿಹರ ತಾಲೂಕಿನ ಮುದಹದಡಿ ಗ್ರಾಮದಲ್ಲಿ 10 ದಿನದಲ್ಲಿ 13 ಜನ ಸಾವನ್ನಪ್ಪಿರುವುದು ಇಡೀ ಗ್ರಾಮಗಳಲ್ಲಿ ಆತಂಕಕ್ಕೆ ಕಾರಣ ಆಗಿದೆ.

ದಾವಣಗೆರೆ
ದಾವಣಗೆರೆ
author img

By

Published : May 24, 2021, 10:01 PM IST

Updated : May 24, 2021, 10:54 PM IST

ದಾವಣಗೆರೆ: ಮಹಾಮಾರಿ ಕೊರೊನಾ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹಬ್ಬುತ್ತಿದ್ದು, ಗ್ರಾಮಸ್ಥರನ್ನು ಆತಂಕಕ್ಕೆ ಮನೆ ಮಾಡಿದೆ. ಇನ್ನು ಒಂದು ಗ್ರಾಮದಲ್ಲಿ
15 ದಿನಕ್ಕೆ 22ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇತ್ತ ಮತ್ತೊಂದು ಗ್ರಾಮದಲ್ಲಿ 10 ದಿನದಲ್ಲಿ 13 ಜನ ಕೊನೆಯುಸಿರೆಳೆದಿರುವುದರಿಂದ ಇಡೀ ಗ್ರಾಮದಲ್ಲಿ ಕೊರೊನಾ ಭಯ ಶುರುವಾಗಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕಡರನಾಯಕನಹಳ್ಳಿ ಹಾಗೂ ಮುದಹದಡಿ ಗ್ರಾಮಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಕಡರನಾಯಕನ ಹಳ್ಳಿಯಲ್ಲಿ 15 ದಿನದಲ್ಲಿ 22 ಜನ ಸಾವನ್ನಪ್ಪಿದ್ರೇ ಇತ್ತ ಇದೇ ಹರಿಹರ ತಾಲೂಕಿನ ಮುದಹದಡಿ ಗ್ರಾಮದಲ್ಲಿ 10 ದಿನದಲ್ಲಿ 13 ಜನ ಸಾವನ್ನಪ್ಪಿರುವುದು ಗ್ರಾಮಗಳಲ್ಲಿ ಆತಂಕಕ್ಕೆ ಕಾರಣ ಆಗಿದೆ. ಇಬ್ಬರು ಕೊರೊನಾದಿಂದ ಕಡರನಾಯಕನಹಳ್ಳಿಯಲ್ಲಿ ಸಾವನ್ನಪ್ಪಿದ್ದು, ಇನ್ನುಳಿದ 20 ಜನ ಕೊರೊನಾ ಭಯದಿಂದ ಹೃದಯಸ್ತಂಭನ, ಲೋ ಬಿಪಿಯಿಂದ ಮೃತಪಟ್ಟಿದ್ದಾರೆ. ಈ ಗ್ರಾಮದಲ್ಲಿ ಒಟ್ಟು 4500 ಜನಸಂಖ್ಯೆ ಇದ್ದು, ಅದರಲ್ಲಿ 110 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ವೇಳೆ 19 ಜನರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ.

ಗ್ರಾಮೀಣ ಭಾಗದಲ್ಲೂ ಕೊರೊನಾ ರಣಕೇಕೆ

ಸೋಂಕಿತರನ್ನು ಹರಿಹರ ತಾಲೂಕು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಕೆಲವರಿಗೆ ತಾಲೂಕು ಆಸ್ಪತ್ರೆಯಲ್ಲಿ ಸ್ಥಳಾವಕಾಶ ಇಲ್ಲದೆ ಹೋಮ್ ಐಸೋಲೆಷನ್​ನಲ್ಲಿರಿಸಲಾಗಿದೆ. ಇದರಿಂದ ಗ್ರಾಮಸ್ಥರನ್ನೆಲ್ಲ ಕೋವಿಡ್ ಟೆಸ್ಟ್ ಗೆ ಒಳಪಡಿಸುವಂತೆ ಜನರು ಒತ್ತಾಯಿಸಿದ್ದಾರೆ.

ಇದಲ್ಲದೆ ಜಿಲ್ಲೆಯ ಹರಿಹರ ತಾಲೂಕಿನ ಮತ್ತೊಂದು ಗ್ರಾಮ ಮುದಹದಡಿಯಲ್ಲಿ ಕೊರೊನಾದಿಂದಾಗಿ ಕೂಡ ಸ್ಮಶಾನ ಮೌನ ಆವರಿಸಿದೆ. 10 ದಿನದಲ್ಲಿ 13 ಜನ ಸಾವನ್ನಪ್ಪಿದ್ದು, ಗ್ರಾಮಸ್ಥರು ಜ್ವರ ಶೀತದಿಂದ ಬಳಲುತ್ತಿರುವುದು ಕಂಡುಬಂದಿದ್ದು, ಸೋಂಕಿನಿಂದಲೇ ಜನ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕಡರನಾಯಕನಹಳ್ಳಿ ಹಾಗೂ ಮುದಹದಡಿ ಗ್ರಾಮದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದನ್ನು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲವಂತೆ.

Last Updated : May 24, 2021, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.