ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಕ್ಕೆ ಮತ್ತೊಂದು ಬಲಿಯಾಗಿದ್ದು, ಮೃತರ ಸಂಖ್ಯೆ 8ಕ್ಕೇರಿದೆ. ಮೃತ ಮಹಿಳೆ ಸೇರಿದಂತೆ ಇಂದು 12 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ.
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಜೂನ್ 29ರಂದು ಆಸ್ಪತ್ರೆಗೆ ದಾಖಲಾಗಿದ್ದ ಹೊಂಡ ಸರ್ಕಲ್ನ 50 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ. ಬಳಿಕ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂಭತ್ತು ವರ್ಷದ ಬಾಲಕಿ ಸೇರಿದಂತೆ 9 ಮಹಿಳೆಯರು ಹಾಗೂ ಮೂವರು ಪುರುಷರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.
ದಾವಣಗೆರೆಯಲ್ಲಿ 7, ಹರಿಹರ 3, ಜಗಳೂರು 1, ಭರಮಸಾಗರದಿಂದ ದಾವಣಗೆರೆಗೆ ಬಂದಿದ್ದ ಓರ್ವರು ಸೋಂಕಿಗೆ ತುತ್ತಾಗಿದ್ದಾರೆ. ಇಂದು 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 309 ಸೋಂಕಿತರ ಪೈಕಿ 266 ಮಂದಿ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ.
ರೋಗಿ ಸಂಖ್ಯೆ 9,890ರಿಂದ ಇಬ್ಬರಿಗೆ, ರೋಗಿ ಸಂಖ್ಯೆ-10,387ರಿಂದ ನಾಲ್ವರಿಗೆ ಸೋಂಕು ತಗುಲಿದೆ. ಎಸ್ಎಆರ್ಐ ಪ್ರಕರಣದ ಮೂವರಿಗೆ ಸೋಂಕು ವಕ್ಕರಿಸಿದೆ. ಇನ್ನುಳಿದ ನಾಲ್ವರ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ. ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಸೀಲ್ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.