ದಾವಣಗೆರೆ: ಎಲ್ಲದಕ್ಕೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಮೇಕೆದಾಟು ವಿವಾದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಸರ್ಕಾರ ಯಾವುದೇ ತಡೆಯಾಜ್ಞೆ ತಂದಿಲ್ಲ. ಈ ಬಗ್ಗೆ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಉತ್ತರ ನೀಡುವ ಅವಶ್ಯಕತೆ ಇಲ್ಲವೆಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ಮುಂದಿನ ವಾರ ಮೀಟಿಂಗ್ ಕರೆಯುವ ವಿಶ್ವಾಸ ಇದೆ. ಇದು ಸಿಡ್ಬ್ಲೂಎಂಎ ಮುಂದೆ ರೆಫರ್ ಆಗಿದೆ. ಸಿಡ್ಬ್ಲೂಎಂಎಗೆ ಅಧಿಕಾರ ಇದೆ. ಆ ಅಧಿಕಾರ ಪ್ರಕಾರ ಅವರು ಸಭೆ ಕರೆಯುವ ಸಾಧ್ಯತೆ ಇದೆ. ನಮ್ಮ ವಾದ ನಾವು ಮಂಡಿಸಿದ್ದೇವೆ. ಡಿಪಿಆರ್ ಅಪ್ರೂವ್ ಆಗುತ್ತೇ ಎಂಬ ವಿಶ್ವಾಸ ಇದೆ ಎಂದರು.
ಸಾಹಿತಿಗಳ ಪಾದಯಾತ್ರೆ ವಿಚಾರ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಸಾಹಿತಿಗಳ ಕುಂಪ್ಪಳಿಂದ ಪಾದಾಯಾತ್ರೆ ಹಮ್ಮಿಕೊಂಡಿದರುವ ಬಗ್ಗೆ ನಾಗೇಶ್ ಅವರಿಗೆ ಹೇಳಿದ್ದೇನೆ. ಅದನ್ನು ಸರಿಪಡಿಸುತ್ತಿದ್ದೇವೆ. ಅವರು ಹೇಳಿದ್ದನ್ನು ನಾವು ಸ್ವೀಕರಿಸುತ್ತಿದ್ದೇವೆ. ಸಲಹೆಗಳನ್ನು ಸ್ವೀಕರಿಸಲು ವೆಬ್ಸೈಟ್ ಓಪನ್ ಮಾಡಿದ್ದೇವೆ. ಅದರಲ್ಲಿ ಆಕ್ಷೇಪಗಳನ್ನು ಹಾಕಲು ಹೇಳಲಾಗಿದೆ. ಈಗಿರುವ ಆಕ್ಷೇಪ ಮತ್ತು ಹಿಂದಿನ ಆಕ್ಷೇಪ ಸರಿಪಡಿಸಬೇಕು ಎನ್ನುವುದಕ್ಕೆ ನಮ್ಮ ಸರ್ಕಾರ ಮುಕ್ತವಾಗಿದೆ ಇದೆ.
ಓದಿ: ಜೂನ್ 17ರ ಮೇಕೆದಾಟು ಸಭೆಗೆ ತಮಿಳುನಾಡು ವಿರೋಧ: ಸುಪ್ರೀಂ ಮೆಟ್ಟಿಲೇರಿದ ಸ್ಟಾಲಿನ್ ಸರ್ಕಾರ
ಕಾಂಗ್ರೆಸ್ ರಾಜಭವನ ಚಲೋ ವಿಚಾರ: ಅವರಿಗೆ ಕೆಲಸ ಇಲ್ಲ. ಆದ್ದರಿಂದ ಹೀಗೆ ಮಾಡ್ತಾರೆ. ಭ್ರಷ್ಟಾಚಾರ ಪರವಾಗಿ ಹೋರಾಟ ಮಾಡುವುದು ಸರಿಯಲ್ಲ. ಈ ರೀತಿ ಕಾಂಗ್ರೆಸ್ ಮಾಡ್ತಾ ಹೋದ್ರೆ ಜನರು ಮುಂದೆ ಕಾಂಗ್ರೆಸ್ ನಾಯಕರ ಮನೆ ಚಲೋ ಮಾಡ್ತಾರೆ ಎಂದು ಸಿಎಂ ಕೈ ನಾಯಕರಿಗೆ ಕುಟುಕಿದರು.
ಹಿಂದಿ ಭಾಷಾ ಮಕ್ಕಳಿಗೆ ಪ್ರವಾಸ ವಿಚಾರ: ಹಿಂದಿ ಭಾಷೆ ಬರುವ ಶಾಲಾ ಮಕ್ಕಳಿಗೆ ಮಾತ್ರ ಉತ್ತರಾಖಂಡ್ ಪ್ರವಾಸಕ್ಕೆ ಅರ್ಹರು ಎಂಬುದು ಆಕ್ರೋಶಕ್ಕೆ ಕಾರಣ ಆಗಿದ್ದು, ಅದು ಸರಿಯಲ್ಲ. ಅದರ ಬಗ್ಗೆ ಸಚಿವ ನಾಗೇಶ್ ಜೊತೆ ಮಾತನಾಡಿದ್ದೇನೆ. ಸುತ್ತೋಲೆ ಹೊರಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೇಳಿದ್ದೇನೆ ಎಂದರು.
ಜಿ.ಪಂ/ತಾ.ಪಂ ಚುನಾವಣೆ ವಿಚಾರ: ಈಗಾಗಲೇ ಬಹುತೇಕವಾಗಿ ಸರಿಪಡಿಸಲಾಗಿದೆ. ಹಿಂದೂಳಿದ ವರ್ಗಗಳ ಆಯೋಗ ವರದಿ ಬಳಿಕ ಚುನಾವಣೆ ನಡೆಸಲಾಗುವುದು. ಅವರು ಸಲಹೆ ಪಡೆಯಲಾಗಿದೆ. ಯಾವುದು ಸರಿಪಡಿಸಬೇಕು ಎಲ್ಲವನ್ನು ನಮ್ಮ ಸರ್ಕಾರ ಸರಿಪಡಿಸುತ್ತದೆ. ಬಿಬಿಎಂಪಿ ಚುನಾವಣೆ ಆದ ಬಳಿಕ, ಬ್ಯಾಕ್ವರ್ಡ್ ಕ್ಲಾಸ್ ಇಲಾಖೆ ಸೂಚನೆಯಲ್ಲಿ ಚುನಾವಣೆ ನಡೆಯಲಿದೆ ಎಂದರು.