ETV Bharat / city

ಸಿದ್ದರಾಮಯ್ಯರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್​ವೈ - ದಾವಣಗೆರೆ

ಹಾನಗಲ್, ಸಿಂದಗಿಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಸಿದ್ದರಾಮಯ್ಯ ಏನೇ ಆರೋಪ ಮಾಡಿದ್ರು ಗೆಲ್ಲಲ್ಲ ಎಂದು ಬಿಎಸ್​ವೈ ಹೇಳಿಕೆ ನೀಡಿದ್ದಾರೆ.

ಬಿಎಸ್​ವೈ
ಬಿಎಸ್​ವೈ
author img

By

Published : Oct 24, 2021, 3:21 PM IST

ದಾವಣಗೆರೆ: ಸಿದ್ದರಾಮಯ್ಯ ಏನೇ ಆರೋಪ ಮಾಡಿದ್ರು ಗೆಲ್ಲಲ್ಲ, ಅವರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ನಗರದ ಜಿಎಂಐಟಿ ಗೆಸ್ಟ್ ಹೌಸ್​​ನಲ್ಲಿ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಬರುತ್ತೆ. ಹಾನಗಲ್, ಸಿಂದಗಿಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ನಮ್ಮೆಲ್ಲ ನಾಯಕರು ಎರಡು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ. ಎರಡು ಕ್ಷೇತ್ರದಲ್ಲಿ ದೊಡ್ಡ ಸಭೆ ನಡೆದಿದೆ. ಸಂಪೂರ್ಣವಾಗಿ ಜನ ಮೋದಿಯವರ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಬಿಎಸ್​ವೈ

ಇದನ್ನೂ ಓದಿ: ಗೋಣಿ ಚೀಲವನ್ನೂ ಬಿಡದ ಸಜ್ಜನರ್‌ ಯಾವುದೇ ಕಾರಣಕ್ಕೂ ಶಾಸಕನಾಗಬಾರದು.. ಮಾಜಿ ಸಿಎಂ ಸಿದ್ದರಾಮಯ್ಯ

ಸಿಂದಗಿ - ಹಾನಗಲ್ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯರ ಅಪಪ್ರಚಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ವಿಪಕ್ಷ ಅಂದ ಮೇಲೆ ಆರೋಪ ಸ್ವಾಭಾವಿಕವಾಗಿರುತ್ತದೆ. ಸಿದ್ದರಾಮಯ್ಯ ಏನ್ ಮಾತಾನಾಡಿದ್ರು ಏನೂ ಆಗಲ್ಲ. ಫಲಿತಾಂಶ ಬಂದ ಮೇಲೆ ಅವರಿಗೆ ಗೊತ್ತಾಗುತ್ತೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಎಸ್​ವೈ ಗುಡುಗಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.