ETV Bharat / city

ತೈಲ ಬೆಲೆ ಏರಿಕೆಯಾದ್ರೆ ಸೈಕಲ್​ನಲ್ಲಿ ಓಡಾಡಿ, ಒಳ್ಳೆಯ ವ್ಯಾಯಾಮ ಆಗುತ್ತೆ : ಸಂಸದ ಸಿದ್ದೇಶ್ವರ್

ಜಿಎಸ್​ಟಿ ಪಾಲು ರಾಜ್ಯಕ್ಕೆ ಸಿಗುತ್ತಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಣಕಾಸು ಸಚಿವರನ್ನು ಕೇಳಿ, ಜಿಎಸ್​ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ, ಈ ಬಗ್ಗೆ ಹಣಕಾಸು ಸಚಿವರನ್ನೇ ಕೇಳಬೇಕು. ಕರ್ನಾಟಕದಲ್ಲಿ ನಾಲ್ಕು ಜನ ಕೇಂದ್ರ ಸಚಿವರು ಇದ್ದಾರೆ ಅವರು ಕೇಳ್ತಾರೆ..

BJP MP GM Siddheshwar
ಜಿ.ಎಂ ಸಿದ್ದೇಶ್ವರ್
author img

By

Published : Jul 10, 2021, 4:58 PM IST

ದಾವಣಗೆರೆ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದರಿಂದ ಸೈಕಲ್​ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಿದರು. ಪೆಟ್ರೋಲ್ ಏರಿಕೆಯಿಂದ ಜನ ಸೈಕಲ್ ಏರೋ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ ಎಂಬ ಪ್ರಶ್ನೆಗೆ ಬೇಜವಾಬ್ದಾರಿ ಹೇಳಿಕೆ ನೀಡಿದ ಸಿದ್ದೇಶ್ವರ್, ಬ್ಯಾರೆಲ್ ರೇಟ್ ಜಾಸ್ತಿ ಇದೆ.

ಪೆಟ್ರೋಲ್ ಬೆಲೆ ಜಾಸ್ತಿ ಆಗಿದ್ದು, ಜನ ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಬಿಡಿ. ಪೆಟ್ರೋಲ್ ಬೆಲೆ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ. ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ. ಕೋವಿಡ್ ಕಡಿಮೆಯಾದ ನಂತರ ಪೆಟ್ರೋಲ್ ದರ ಇಳಿಸುತ್ತಾರೆ ಎಂದರು.

ತೈಲ ಬೆಲೆ ಏರಿಕೆ ಕುರಿತು ಜಿ.ಎಂ ಸಿದ್ದೇಶ್ವರ್ ಬೇಜವಾಬ್ದಾರಿ ಹೇಳಿಕೆ

ಇನ್ನು, ಜಿಎಸ್​ಟಿ ಪಾಲು ರಾಜ್ಯಕ್ಕೆ ಸಿಗುತ್ತಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಣಕಾಸು ಸಚಿವರನ್ನು ಕೇಳಿ, ಜಿಎಸ್​ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ, ಈ ಬಗ್ಗೆ ಹಣಕಾಸು ಸಚಿವರನ್ನೇ ಕೇಳಬೇಕು. ಕರ್ನಾಟಕದಲ್ಲಿ ನಾಲ್ಕು ಜನ ಕೇಂದ್ರ ಸಚಿವರು ಇದ್ದಾರೆ ಅವರು ಕೇಳ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.