ETV Bharat / city

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಬಿಟ್‌ಕಾಯಿನ್ ಹಗರಣ: ಜಗದೀಶ್ ಶೆಟ್ಟರ್ - ಕರ್ನಾಟಕ ಪರಿಷತ್ ಚುನಾವಣೆ

ನಗರದ ಎಸ್.ಎಸ್.ಸಭಾಂಗಣದಲ್ಲಿ ನಡೆದ ಬಿಜೆಪಿ ಜನಸ್ವರಾಜ್ (BJP Jan Swaraj at Davanagere) ಸಮಾವೇಶದಲ್ಲಿ ಬಿಜೆಪಿ ನಾಯಕರು ಮಾತನಾಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

BJP Jan Swaraj
BJP Jan Swaraj
author img

By

Published : Nov 18, 2021, 3:37 PM IST

ದಾವಣಗೆರೆ: ಕಾಂಗ್ರೆಸ್​‌ನವರಿಗೆ ಮೋದಿ ವಿರುದ್ಧ ಟೀಕೆ ಮಾಡಲು ವಿಷಯ ಇಲ್ಲ. ಆದ್ದರಿಂದ ಬಿಟ್‌ಕಾಯಿನ್ (Karnataka Bitcoin scam) ವಿಚಾರವನ್ನು ಎತ್ತಿದ್ದಾರೆ. ಈ ಬಿಟ್‌ಕಾಯಿನ್ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಇತ್ತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೂರಿದರು.

ನಗರದ ಎಸ್.ಎಸ್.ಸಭಾಂಗಣದಲ್ಲಿ ನಡೆದ ಬಿಜೆಪಿ ಜನಸ್ವರಾಜ್ (BJP Jan Swaraj at Davanagere) ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಪಕ್ಷದವರನ್ನೇ ಟಾರ್ಗೆಟ್ ಮಾಡಿಕೊಂಡು ಬಿಟ್‌ಕಾಯಿನ್ ಪ್ರಸ್ತಾಪ ಮಾಡಿದ್ದಾರೆ. ನಿನ್ನೆ ನಡೆದ ಘಟನೆ ಕಾಂಗ್ರೆಸ್​ನಲ್ಲಿ ಭಿನ್ನಮತ ಇದೆ ಎನ್ನುವುದು ಕಾಣಿಸುತ್ತದೆ. ಸಿದ್ದರಾಮಯ್ಯ ಭಾಷಣ ಮಾಡುವಾಗ ಡಿಕೆ.. ಡಿಕೆ.. ಎಂದು ಕೂಗಿದ್ದಾರೆ, ಕಾಂಗ್ರೆಸ್​‌ನಲ್ಲಿ ನಾಯಕರ‌ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವಾಗ್ದಾಳಿ ನಡೆಸಿದರು.

ಪರಿಷತ್ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುತ್ತೇವೆ. ಯಾವುದೇ ಚುನಾವಣೆಯಲ್ಲಿ ಬೇರೆ ಪಕ್ಷದ ಸಹಾಯ ಪಡೆಯೋದಿಲ್ಲ, ಬಿಜೆಪಿ ಸ್ವಂತ ಬಲದಲ್ಲಿ ಚುನಾವಣೆ ಎದುರಿಸುತ್ತೇವೆ, ವಿಧಾನ ಪರಿಷತ್​ನಲ್ಲಿ ನಮ್ಮವರೇ ಸಾಕಷ್ಟು ಜನ ಇದ್ದಾರೆ, ಈ ಬಾರಿ ಚುನಾವಣೆಯಲ್ಲಿ ಬಹುಮತ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ವಾಗ್ದಾಳಿ

ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದ್ರೆ ಸರ್ಕಾರ ಮಾಡಬಹುದು ಎಂದು ಕಾಂಗ್ರೆಸ್​​ನ ಇಬ್ಬರು ದೊಡ್ಡ ನಾಯಕರು ಈ ರೀತಿ ಹೇಳುತ್ತಿದ್ದಾರೆ. ಜೊತೆಗೆ ಈಗ ಅಹಿಂದ ಮಾತುಗಳು ಕೇಳಿ ಬರುತ್ತಿವೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಸಚಿವ ಡಾ.ಕೆ.ಸುಧಾಕರ್ ಪರೋಕ್ಷ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನವರು ಜಾತಿ-ಜಾತಿಗಳ ನಡುವೆ ಜಗಳ ಹಚ್ಚುತ್ತಿದ್ದಾರೆ, ದಲಿತರನ್ನ ಒಡೆಯುತ್ತಿದ್ದಾರೆ. ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.

ಜೊತೆಗೆ, ಅಲ್ಪಸಂಖ್ಯಾತರ ಅಭಿವೃದ್ಧಿಗೂ ಕಾಂಗ್ರೆಸ್ ಏನೂ ಮಾಡಿಲ್ಲ, ಅಲ್ಪ ಸಂಖ್ಯಾಂತರು ಕಾಂಗ್ರೆಸ್ಸಿನ ಗುಲಾಮರಾಗಿ ಇರಬೇಕು ಎಂಬುದು ಕಾಂಗ್ರೆಸ್ ಸಿದ್ಧಾಂತವಾಗಿದೆ, ದೇಶದ ಜನರ ಭಾವನೆಗೆ ಸ್ಪಂದಿಸಿದ ಏಕೈಕ ನಾಯಕರು ನರೇಂದ್ರ ಮೋದಿಯವರು, ನರೇಂದ್ರ ಮೋದಿಯವರು ಯಾವತ್ತೂ ಜಾತಿಗಳ ಬಗ್ಗೆ ಮಾತಾಡಿಲ್ಲ ಎಂದರು.

ಕಾಂಗ್ರೆಸ್​ನವರು ಹೇಳೋ ಮಾತಿನಲ್ಲಿ ಸತ್ಯ ಇಲ್ಲ, ಅವರ ಆರೋಪದ ಬಗ್ಗೆ ಯಾವುದೇ ದಾಖಲೆ ಕೊಡ್ತಾ ಇಲ್ಲ, ಅವರಿಗೆ ಯಾರ ಜೊತೆ ಸ್ನೇಹ ಇತ್ತು ಅನ್ನೋದು ಜನರಿಗೆ ಕಂಡು ಬರ್ತಿದೆ, 16 ರಿಂದ ಅವರು ಯಾರ ಜೊತೆ ಹೋಟೆಲ್​​ನಲ್ಲಿ ಸ್ನೇಹ ಬೆಳೆಸಿದ್ದರು, ಯಾರು ಅವರ ಬಿಲ್ ಕೊಡ್ತಾ ಇದ್ದರು ಅನ್ನೋದು ಹೊರಗೆ ಬರುತ್ತೆ, ನಾನು ಯಾರ ವೈಯಕ್ತಿಕ ಹೆಸರೂ ಹೇಳಲ್ಲ, ತನಿಖಾ ವರದಿಯಲ್ಲಿ ಕಾಂಗ್ರೆಸ್‌ನ ಯಾವ ಯಾವ ನಾಯಕರಿದ್ದಾರೆ, ಯಾವೆಲ್ಲಾ ಕಾಂಗ್ರೆಸ್ ಲೀಡರುಗಳ ಮಕ್ಕಳಿದ್ದಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಾಗುತ್ತೆ ಎಂದು ಆರೋಗ್ಯ ಸಚಿವ ಸುಧಾಕರ್ ಕಿಡಿಕಾರಿದರು.

ಬಿಟ್‌ಕಾಯಿನ್ ಅಂದ್ರೆ ನನಗೆ ಗೊತ್ತಿಲ್ಲ,‌ ಆದ್ರೆ, ಮೈಸೂರು ಬ್ಯಾಂಕ್ ನ್ಯಾಷನಲ್ ಬ್ಯಾಂಕ್ ಗೊತ್ತು ಅದನ್ನು ಬಿಟ್ಟು ಇದ್ಯಾವುದೋ ಬಿಟ್‌ಕಾಯಿನ್ ಅಂದ್ರೆ ಗೊತ್ತಿಲ್ಲ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ ಸಿಎಂ ಬದಲಾವಣೆ ಆಗ್ತಾರೆ ಎಂಬ ಭವಿಷ್ಯ ಹೇಳುತ್ತಿರಬಹುದು, ಮೇಲಾಗಿ ಪ್ರಿಯಾಂಕ್ ಖರ್ಗೆ ಬಿಟ್‌ಕಾಯಿನ್ ವಿಚಾರದ ಬಗ್ಗೆ ಕೂಡ ಭವಿಷ್ಯ ಹೇಳುತ್ತಿದ್ದಾರೆ, ಬಹುಶಃ ಅವರು ಭವಿಷ್ಯ ಹೇಳುವುದನ್ನ ‌ಕಲಿತಿರಬೇಕು. ಸಿಎಂ ಬೊಮ್ಮಯಿ ಯವರು ಇರುವ ಅವಧಿಯನ್ನು ಪೂರೈಸುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.