ETV Bharat / city

ಜಯಪ್ರಕಾಶ್ ವರದಿ ಬಳಿಕ ಪಂಚಮಸಾಲಿ ಸಮಾಜಕ್ಕೆ ಒಳ್ಳೆದಿನಗಳು ಬರಲಿವೆ: ಸಿಎಂ - 2a Reservation

ಪಂಚಾಮಸಾಲಿ ಸಮಾಜದ ಹೋರಾಟಕ್ಕೆ ಒಳ್ಳೆದಿನಗಳು ಬರಲಿವೆ ಎಂದು ಹೇಳುವ ಮೂಲಕ 2A ಮೀಸಲಾತಿ ನೀಡುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ನೀಡಿದರು.

Basavaraj Bommai reaction about Panchamasaali society struggle
ಜಯಪ್ರಕಾಶ್ ವರದಿ ಬಂದ ಮೇಲೆ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಒಳ್ಳೆದಿನಗಳು ಬರಲಿವೆ: ಸಿಎಂ
author img

By

Published : Apr 23, 2022, 8:06 PM IST

ದಾವಣಗೆರೆ: ಜಯಪ್ರಕಾಶ್ ವರದಿ ಸರ್ಕಾರಕ್ಕೆ ಹಸ್ತಾಂತರವಾದ ಬಳಿಕ ಪಂಚಾಮಸಾಲಿ ಸಮಾಜದ ಹೋರಾಟಕ್ಕೆ ಒಳ್ಳೆದಿನಗಳು ಬರಲಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಹರಿಹರದ ಪಂಚಮಸಾಲಿ ಮಠದ ಉದ್ಯೋಗ ಮೇಳ ಹಾಗು ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ‌ ಅವರು, ಯಡಿಯೂರಪ್ಪನವರ ಅವಧಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 3B ಮೀಸಲಾತಿ ನೀಡಲಾಗಿದೆ. ಈಗ 2Aಗೆ ಬೇಡಿಕೆ ಸರ್ಕಾರದ ಮುಂದೆ ಬಂದಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ಇದೆ ಎಂದರು.

ಎಲ್ಲಾ ಸಮಾಜವನ್ನು ಸಮಾನತೆಯಿಂದ ನೋಡುವ ಜವಾಬ್ದಾರಿ ನನ್ನ ಮೇಲಿದೆ. ಶೋಷಿತ ಸಮಾಜಗಳ ಪರಿಕಲ್ಪನೆ ಕೂಡ ನನ್ನ ಮೇಲಿದೆ. ಬ್ಯಾಕ್ವರ್ಡ್ ಕ್ಲಾಸ್ ವರದಿ ಬಂದ ಮೇಲೆ ಎಲ್ಲರ ವಿಶ್ವಾಸ ತೆಗೆದುಕೊಂಡು ಮೀಸಲಾತಿ ನಿರ್ಧರಿಸುತ್ತೇವೆ. ಹಿಂದುಳಿದ ವರ್ಗಗಳ ಆಯೋಗ ಪ್ರತಿಯೊಂದು ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಿದರು.

ಶ್ರೀಗಳು ಭಕ್ತರನ್ನು ಒಂದುಗೂಡಿಸುವ ಕೆಲಸ ಮಾಡಬೇಕು. ನಮ್ಮ ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತೇವೆ. ಸಮಾಜದ ಭವಿಷ್ಯ ಬಂದಾಗ ನಾವೆಲ್ಲಾ ಒಂದಾಗಿ ಹೋಗಬೇಕು ಎಂದು ಕೂಡಲಸಂಗಮ ಪೀಠ ಹಾಗು ಹರಿಹರ ಪೀಠ ಒಂದಾಗಬೇಕೆಂದು ವಚನಾನಂದ ಶ್ರೀಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ದಯೆಯೇ ಧರ್ಮದ ಮೂಲ, ಧರ್ಮ ಧರ್ಮದ ಮಧ್ಯೆ ಸಂಘರ್ಷ ಬೇಡ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.