ETV Bharat / city

ಹಳೇ ದ್ವೇಷ: ಚಾಕುವಿನಿಂದ ಇರಿದು ಗ್ರಾ.ಪಂ. ಸದಸ್ಯನ ಕೊಲೆಗೆ ಯತ್ನ - ನ್ಯಾಮತಿ ತಾಲೂಕಿನ ಚೀಲೂರು ಗ್ರಾಮ

ಹಳೇ ದ್ವೇಷ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Attempted murder by stabbing a Gram panchayat member with a knife
ಚಾಕುವಿನಿಂದ ಇರಿದು ಗ್ರಾ.ಪಂ ಸದಸ್ಯನ ಕೊಲೆಗೆ ಯತ್ನ
author img

By

Published : Mar 22, 2021, 1:32 PM IST

ದಾವಣಗೆರೆ: ಹಳೇ ದ್ವೇಷ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಂಗೋಟೆ ಗ್ರಾ.ಪಂ. ಸದಸ್ಯ ನಾಗರಾಜ್‌ ಮತ್ತು ರಾಕೇಶ್​ ಎಂಬುವವರ‌ ಮಧ್ಯೆ ಈ ಹಿಂದೆ ಕ್ಷುಲ್ಲಕ ಕಾರಣಕ್ಕೆ ಸಣ್ಣ ಗಲಾಟೆ ನಡೆದಿತ್ತು. ಅದೇ ದ್ವೇಷದಿಂದ ರಾಕೇಶ್, ದರ್ಶನ್ ಎಂಬುವರು ಚೀಲೂರಿನ ಬಸ್ ನಿಲ್ದಾಣ ಬಳಿ ನಾಗರಾಜ್​ಗೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ಗಾಯಗೊಂಡಿದ್ದ ನಾಗರಾಜ್​ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆರೋಪಿಗಳನ್ನು ಬಂಧಿಸಿರುವ ನ್ಯಾಮತಿ ಪೊಲೀಸರು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್​ಪಿ ಹನುಮಂತರಾಯ, ಎಎಸ್​ಪಿ ರಾಜೀವ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಓದಿ: ‘ಹನಿಟ್ರ್ಯಾಪ್’ ಬಲೆಗೆ ಬಿದ್ದ ಮಾಜಿ ಶಾಸಕರ ಪುತ್ರ​: ದೂರು ದಾಖಲಿಸಿದ ‘ಅಪರಿಚಿತ’

ETV Bharat Logo

Copyright © 2025 Ushodaya Enterprises Pvt. Ltd., All Rights Reserved.