ದಾವಣಗೆರೆ: ತಾಲೂಕಿನ ಐಗೂರು ಗ್ರಾಮದ ಬಳಿ ಇರುವ ಎಂಎಸ್ಐಎಲ್ ಮದ್ಯದಂಗಡಿಗೆ ಕನ್ನ ಹಾಕಿರುವ ಖದೀಮರು ಮಳಿಗೆಯಲ್ಲಿನ ಮದ್ಯ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ. ಇದಲ್ಲದೇ ಪೊಲೀಸರಿಗೆ ಸಾಕ್ಷಿ ದೊರೆಯಬಾರದು ಎಂದು ಸಿಸಿ ಕ್ಯಾಮರಾದ ಡಿವಿಆರ್ ಕೂಡ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು 2 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ ನಗದು ಕಳ್ಳತವಾಗಿದೆ. ನಿನ್ನೆ(ಶುಕ್ರವಾರ) ಬೆಳಗ್ಗೆ ಐಗೂರು ಗ್ರಾಮಸ್ಥರು ಗಮನಿಸಿದಾಗ ಅಂಗಡಿಯ ಶೆಟರ್ಸ್ ಮೇಲಕ್ಕೆ ಎತ್ತಲಾಗಿತ್ತು. ಅನುಮಾನಗೊಂಡು ಮಾಲೀಕರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಕೂಡ ಪರಿಶೀಲನೆ ನಡೆಸಲಾಗಿದೆ. ಸದ್ಯ ಪೊಲೀಸರು ಖದೀಮರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: 6 ಲಕ್ಷ ಮೌಲ್ಯದ ಪಡಿತರ ಅಕ್ಕಿ ಕಳ್ಳ ಸಾಗಾಟ: ಪೊಲೀಸರಿಂದ ಜಪ್ತಿ