ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಂದು ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದ್ದಾರೆ. ಅಪ್ಪು ಕೇವಲ ನಟನೆ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳಲ್ಲೂ ಭಾಗಿಯಾಗಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ದಾವಣಗೆರೆ ಮೂಲದ ಬಾಲಕಿಯ ಶಸ್ತ್ರಚಿಕಿತ್ಸೆಗೆ ಆಸರೆಯಾಗಿ ಆರ್ಥಿಕ ಸಹಾಯ ಮಾಡಿ ಮರು ಜೀವ ನೀಡಿದ್ದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಸಾಲು ಬೀದಿಯ ಬಾಲಕಿ ಪ್ರೀತಿಗೆ ಸಹಾಯ ಮಾಡಿದ್ದರು. ಕುಮಾರ್ ಹಾಗೂ ಮಂಜುಳಾ ಎನ್ನುವವರ ಪುತ್ರಿ ಬಾಲಕಿ ಪ್ರೀತಿ ಅಪ್ಪಟ ಅಪ್ಪು ಅಭಿಮಾನಿ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಆರ್ಥಿಕ ಸಹಾಯ ಮಾಡಿದ್ದರು.
2017 ರಲ್ಲಿ ಸಾಯುವುದಕ್ಕೂ ಮೊದಲು ಪುನೀತ್ ರಾಜ್‍ಕುಮಾರ್ ಅವರನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದ ಬಾಲಕಿ ಪ್ರೀತಿಯ ಆಸೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನನಸು ಮಾಡಿದ್ದರು. ಬಾಲಕಿ ಪ್ರೀತಿಯನ್ನು ಭೇಟಿಯಾಗಿ ₹15 ಲಕ್ಷ ನೀಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದರು.
ಅಪ್ಪು ಅಗಲಿಕೆಗೆ ಕಂಬನಿ ಮಿಡಿದ ಪ್ರೀತಿ:
ಅಂದು ಬಾಲಕಿ ಪ್ರೀತಿ ಮನೆಗೆ ಭೇಟಿ ನೀಡಿದ್ದ ಪುನೀತ್ ಉಡುಗೊರೆಯಾಗಿ ಬ್ಯಾಗ್ ನೀಡಿದ್ದರು. ಇಂದು ಮೆಚ್ಚಿನ ನಟನ ಅಗಲಿಕೆಯಿಂದ ದುಃಖಿತರಾದ ಪ್ರೀತಿ, ಬ್ಯಾಗ್ ಹಿಡಿದು ನೋವು ಹೇಳಿಕೊಂಡರು.
ಓದಿ: ಇದೊಂದು ನೆನಪು.. ಅಭಿಮಾನಿಗಳ 'ಫ್ರೆಂಚ್ ಬಿರಿಯಾನಿ' ಟ್ರೈಲರ್ ಸ್ಪೂಫ್ ಶೇರ್ ಮಾಡಿ ಶಬ್ಬಾಶ್ ಎಂದಿದ್ದ ಪುನೀತ್