ETV Bharat / city

ಮಳೆ ಹೊಡೆತಕ್ಕೆ ಜನ ತತ್ತರ, ಧರೆಗುರಿಳಿದ 175 ಮನೆ : ಜಿಲ್ಲಾಡಳಿತದಿಂದ ಪಟ್ಟಿ ಬಿಡುಗಡೆ - ಮಳೆಯ ಅವಾಂತರ

ಜುಲೈ ಒಂದರಿಂದ ಈ ವರೆಗೆ ಮಳೆಯಿಂದಾದ ಹಾನಿಯ ಕುರಿತು ದಾವಣಗೆರೆ ಜಿಲ್ಲಾಡಳಿತ ಪಟ್ಟಿ ಬಿಡುಗಡೆ ಮಾಡಿದೆ.

175-houses-collapsed-in-davangere-district
ಮಳೆ ಹೊಡೆತಕ್ಕೆ ಜನ ತತ್ತರ
author img

By

Published : Jul 18, 2022, 5:32 PM IST

ದಾವಣಗೆರೆ: ಜಿಲ್ಲೆಯಲ್ಲಿ ನಿರಂತವಾಗಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಬೆಳೆಗಳಯ ಕಟಾವು ಆಗಿದ್ದರಿಂದ ಬೆಳೆ ಹಾನಿ ಕಡಿಮೆ ಪ್ರಮಾಣದಲ್ಲಿ ಆಗಿದೆ. ಜಿಲ್ಲಾಡಳಿತ ಮಳೆಯಿಂದ ಉಂಟಾದ ಅನಾಹುತದ ವಿವರವಾದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಒಂದು ವಾರದಿಂದ ಸುರಿದ ಮಳೆಗೆ ಮನೆಗಳು ನೆಲಕಚ್ಚಿದ್ದರಿಂದ ಜನ ಹೈರಾಣಾಗಿದ್ದಾರೆ. ಇಂದಿಗೂ ಕೂಡ ಮಳೆ ಹಾನಿ ಮುಂದುವರೆದಿದ್ದು, ಜುಲೈ ಒಂದರಿಂದ ಒಟ್ಟು 175 ಮನೆಗಳ ಕುಸಿದಿದ್ದು, ಒಟ್ಟು ಮೂರು ಸೇತುವೆಗಳು ನಾಶವಾಗಿವೆ. ಇಂದಿಗೂ ಕೂಡ ಚನ್ನಗಿರಿ ಹಾಗೂ ಹೊನ್ನಾಳಿಯ ಭಾಗದಲ್ಲಿ ಮಳೆ ಮುಂದುವರೆದಿದ್ದರಿಂದಾಗಿ ಜನ ರೋಸಿ ಹೋಗಿದ್ದು, ಮನೆ ಕುಸಿತ ಪ್ರಕರಣಗಳು ಮುಂದುವರೆದಿದೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಗೆದ್ಲಟ್ಟಿ ಗ್ರಾಮದಲ್ಲಿ ವಿಪರೀತ ಮಳೆಯಿಂದಾಗಿ ಮನೆ ನೆಲಕಚ್ಚಿದೆ, ನಲ್ಲೂರ ಹಾಲೇಶ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಕುಸಿದಿದೆ. ಇನ್ನು ಕೆಲ ಮನೆಗಳು ಮಳೆ ನಿಂತ ಬಳಿಕ ಕೂಡ ಕುಸಿದು ಬೀಳುತ್ತಿದ್ದು, ಜನ ಆತಂಕದಲ್ಲಿದ್ದಾರೆ. ನಿರಂತರ ಮಳೆಗೆ ಅಪಾರ ಹಾನಿಯಾಗಿದ್ದು, ವಿವಿಧ ಇಲಾಖೆಗಳ ಜಂಟಿ ಸಮೀಕ್ಷೆಗೆ ಜಿಲ್ಲಾಡಳಿತ ಮುಂದಾಗಿದೆ.

ಇದನ್ನೂ ಓದಿ : ಸಾತ್ನಾಳಿ-ಮಾಚಾಳಿ ಗ್ರಾಮದ ಸೇತುವೆ ಮುಳುಗಡೆ.. ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.